ಪ್ರೇಮ ಖೈದಿ
ನಿನ್ನ ಸ್ಪರ್ಧಿಯನ್ನು ಕದ್ದೊಯ್ಯಬೇಕಿದೆ
ಗಾಳಿಯೇ ತುಸು ಬಿರುಸಾಗಿ ಬೀಸು
ಕಳ್ಳ ಬೆಕ್ಕಿನ ನಡಿಗೆ ತಿಳಿಯದಿರಲಿ
ಇಗೋ, ಅವಳಿಗೂ ಅರಿವಾಗುವ ಮೊದಲೇ
ಹೃದಯವಾ ಕದ್ದಿರುವೆ
ಅವಳು ಸೆರೆ ಹಿಡಿದು
ಬಂದೀಖಾನೆಗೆ ದಬ್ಬುವ ಮುನ್ನವೇ
ನಿರೀಕ್ಷಣಾ ಜಾಮೀನು ಬೇಕಾಗಿದೆ
ಬೀದಿ ಬದಿಯ ಕಳ್ಳನಿಗೆ
ಕೊಹಿನೂರು ಸಿಕ್ಕಂತೆ ನೀನು
ಅಪಹರಿಸದೇ ಬಿಡಬೇಕೆ ನಿನ್ನನು
ಸಜೆಯಾದರೂ ಸಿಹಿ ಸಂಕಟವೇ
ನೀ ಇರಲೂ ಅದು ಕೂಡ ಸ್ವರ್ಗವೇ

Comments
Post a Comment