ಗುಲ್ ಮೊಹರ್ ಹುಡುಗಿಗೆ


ವಿರಹದೂರಿಗೆ ನಿನ್ನ ಹೆಸರಿಡಲೇ

ಯಾವುದೇ ಸುಂಕವಿಲ್ಲ, ರಹದಾರಿ ಬೇಕಿಲ್ಲ 

ಕಾದಿರುವೆ ದಾರಿಯುದ್ದಕ್ಕೂ ಹೂವ ಚೆಲ್ಲಿ 

ಸಂಜೆ ರಂಗೇರುವ ಹೊತ್ತಾಯಿತು 

ಮನಸ್ಸಿಗೆ ಏಕಾಂತ ಸಾಕಾಯಿತು..


ಇನ್ನೆಷ್ಟು ದಿನ ಈ ವಿರಹದ ಬೇಗೆ 

ಕವಲೊಡೆದ ಅವನಿಯಂತಾಗಿದೆ ಮನ 

ಪನ್ನೀರು ಅಲ್ಲದಿದ್ದರೂ, ನೀರನ್ನಾದರೂ ಸುರಿಯುವೆಯಾ

ಹೃದಯದ ಡೇರೆಯಲ್ಲಿ ಮತ್ತೆ "ಹೂ" ಬಿಡಬಹುದು...!

Comments