ಕಡು ಬಡವನ ಅಪ್ರತಿಮ ಸುಂದರಿ

ಅವಳು ಕಾಡಿಗೆ ಹಚ್ಚುವುದೇ ನನ್ನ ಏಕಾಗ್ರತೆಗೆ ಭಂಗ ತರಲು 

ಕೂದಲು ಹರಡಿದರಂತೂ ಗರಿ ಬಿಚ್ಚಿದ ನವಿಲು 

ಪ್ರಕೃತಿಯು ಕೂಡ ಸೌಂದರ್ಯವನ್ನು ಇವಳಿಂದ ಪಡೆದುಕೊಂಡಿದೆ ಎರವಲು 

ಪ್ರೀತಿಯಲ್ಲಿ ತೇಪೆ ಬಟ್ಟೆ ತೊಟ್ಟ ಕಡು ಬಡವನ ನಾನು

ಪ್ರತಿ ಬಾರಿಯೂ ನನ್ನ ಹೃದಯ ಹೊಲಿಯುವ ದರ್ಜಿ ಅವಳು

ಅವಳ ಕಾಡುವಿಕೆಗೆ ವಿಲವಿಲನೇ ಒದ್ದಾಡುವ ವ್ಯಾಧಿಸ್ಥ ನಾನು 

ಹಕೀಮನ ವೇಷ ತೊಟ್ಟು ನೋವಿಗೆ ಮುಲಾಮು ನೀಡುವ ಅಪ್ಸರೆ ಆಕೆ 

ಇಷ್ಟೇ ಸಾಕೇ ಅವಳನ್ನು ಹೊಗಳಲು ಇನ್ನೇನಾದರೂ ಬೇಕೇ..?

ಬೇಕು..

ಅವಳ ಮುಗ್ಧ ನೋಟ... ಆ ಅಕ್ಷಿ ಪಟಲಗಳು... ಆ ನಾಸಿಕ 

ಹೋಗ್ ಅತ್ಲಾಗೆ ಎಷ್ಟು ಸಲ ಅಂತ ಸೋಲೋದು ಅವಳಿಗೆ

ಆದರೂ ಸೋಲಿನಲ್ಲೂ ಖುಷಿಯುಂಟು ಆತ್ಮ ಉಂಟು 

 ಜೊತೆ ಇರದಿದ್ದರೂ ಅವಳೆಂದಿಗೂ ನನ್ನ ಜೋಡಿ ಜೀವ 






Comments