ಸನಿಹ
ಸಾಗರದಾಚೆ ಇದ್ದರೂ ಸನಿಹ ನೀ
ಕಣ್ಣಿಗೆ ದಕ್ಕದಿದ್ದರೂ ನನ್ನೊಳಗಿನ ಆತ್ಮ ನೀ
ನಾಳೆಗಾಗಿ..
ನಿನಗಾಗಿ..
ಈ ಕಾಯುವಿಕೆ..
ನನಗಾಗಿ ಬರುವೆ ನೀ..
ಪರ್ವತದಂಚಿಂದ ತೊರೆಯೊಂದು ಬಂದಂತೆ..
ಸಂತೆಯಲ್ಲಿ ಕಳೆದು ಹೋದ ಮಗುವಿಗೆ ತಾಯಿ ಸಿಕ್ಕಿದಂತೆ
ಬೆನ್ನಿನ ಮೇಲೆ ನಾಲ್ಕು ಬಾರಿಸಿ ಮುದ್ದಿಸುವಂತೆ..
ಇದು ಕನವರಿಕೆಯಲ್ಲ.. ಭಗೀರಥನ ತಪಸ್ಸಿನಂತೆ
ಉಸಿರಾಡುವ ಈ ಶವದ ಮೇಲೆ ಹರಿ ಗಂಗೆಯಂತೆ
ನನಗೆ ಮುಕ್ತಿ ಸಿಗಲಿ.. ನಿನ್ನಾತ್ಮಕ್ಕಂಟಿ ಮೋಕ್ಷ ಸಿಗಲಿ..
Comments
Post a Comment