ಪ್ರಸ್ತುತ

ಪತ್ರಗಳು ಕಡಿಮೆಯಾಗಿದ್ದಾವೆ... ಇಮೇಲ್ಗಳು ಹೆಚ್ಚಾಗಿವೆ.. ಓದುವವರು ಕಡಿಮೆಯಾಗಿದ್ದಾರೆ.. ಬರೆಯುವವರು ಹೆಚ್ಚಾಗಿದ್ದಾರೆ.. ಹೇಳುವವರು ಜಾಸ್ತಿ ಜನರಿದ್ದಾರೆ.. ಕಿವಿಗಳಿದ್ದರೂ ಕೇಳುವವರು ಕಡಿಮೆಯಿದ್ದಾರೆ.. ಪ್ರೇಮಿಸುವವರು ಹೆಚ್ಚಾಗಿದ್ದಾರೆ.. ಧ್ಯಾನಿಸುವವರು ಕಡಿಮೆಯಾಗಿದ್ದಾರೆ.. ಕಾಡಿನಲ್ಲಿ ಮರಗಳು ಕಡಿಮೆಯಾಗುತ್ತಿವೆ.. ನಾಡಿನಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಾಗುತ್ತಿವೆ.. ಹೀಗೆ ಹುಡುಕುತ್ತಾ ಹೋದರೆ ಎಲ್ಲವೂ ಅಸಮತೋಲನದಲ್ಲಿದೆ... ಎಲ್ಲವೂ ಗೊಂದಲಮಯ.. ಹುಟ್ಟು - ಸಾವು ನಿತ್ಯ ಜಂಜಾಟಗಳಲ್ಲಿ ಮನುಜ ತನ್ನನೇ ತಾನು ಮಾರಿಕೊಂಡಿದ್ದಾನೆ.. ಮಾನವೀಯತೆ ವಿರಳವಾಗಿದೆ.. ಮೃಗೀಯತೆ ಹೆಚ್ಚಾಗಿದೆ.. ಶಿಕ್ಷಣ, ಆರೋಗ್ಯ ಎಲ್ಲವೂ ಮಾರಾಟಕ್ಕಿದೆ.. ಶಿಕ್ಷಕರು ಪಾಠವನ್ನು ದಿನ ನಿತ್ಯದ ಸ್ನಾನದಂತೆ ಬೇಕು ಬೇಡದಂತೆ ಮಾಡುವವರಿದ್ದಾರೆ.. ಸಸಿಗಳನ್ನು ಪೋಷಿಸುವ ರೀತಿಯಲ್ಲಿ ಹೇಳಿ ಕೊಡುವ ಗುರುಗಳ ಪಾಠವನ್ನು ನಿರ್ಲಕ್ಷಿಸುವ ಮೂರ್ಖರಿದ್ದಾರೆ.. ಇಲ್ಲಿ ಎಲ್ಲರಿಗೂ ಎಲ್ಲವೂ ಗೊತ್ತು.. ಇಲ್ಲಿ ಯಾರಿಗೂ ಏನೂ ತಿಳಿದಿಲ್ಲ.. ಇಲ್ಲಿ ಎಲ್ಲರೂ ಪಂಟರ್ಗಳೇ... ಎಲ್ಲರೂ ಪಂಚರ್ಗಳೇ.. "ಯಾರಿಗೆ ಏನು ಮಾಡಬೇಕೆಂದು ಸರಿಯಾಗಿ ಮಾರ್ಗದರ್ಶನ ನೀಡವವರು ಮಾತ್ರ ಕಾಣೆಯಾಗಿದ್ದಾರೆ"... ಪ್ರಪಂಚ ಉಲ್ಟಾಪಲ್ಟಾ ಆಗಿದೆ. ಇಲ್ಲಿ ಬರೆದಿರುವುದೆಲ್ಲಾ ಡೋಂಗಿ.. ಅಲ್ಲೋ ಇಲ್ಲೋ ಸತ್ಯ ಸಂಗತಿಗಳು ಇಣುಕಿದರೆ ಅದು ಅದೃಷ್ಟವೇ ಸರಿ.

-ಮಹೇಶ್. ಆರ್
೨೦/೦೪/೨೦೧೮

Comments

Popular Posts