ಕವಿತೆ
ಮಾತುಗಳಿಗೆ ಕಡಿವಾಣ ಹಾಕಿರಬಹುದು
ಭಾವನೆಗಳನ್ನು ಬಂಧಿಸಲು ಸಾಧ್ಯವೇ
ದೇಹಗಳು ದೂರ ದೂರವಿರಬಹುದು
ಮನಸ್ಸಿಗಳಿಗೆ ಅಂತರವಿದೆಯೇ
ಬೆನ್ನಿನಲ್ಲಿ ಮಾಸದೆ ಉಳಿದಿರುವ ಗಾಯದ ಕಲೆಯಂತೆ ನೀನು..!
ಕಾಣದಿದ್ದರೂ ಎಟುಕದಿದ್ದರೂ ನನ್ನಲ್ಲಿಯೇ ಜೀವಸೆಲೆಯಂತಿರುವ ನೀನು
ಎಂದೂ ಸಿಗದ ಚಿನ್ನದ ಊರಿನಂತೆ ನೀನು
ಸುವರ್ಣ ಸುಂದರಿಯ ಬೆನ್ನಟ್ಟಿ ಹೊರಟ ಅಲೆಮಾರಿ ನಾನು..!
ಖಾಲಿಯಾದ ಲೇಖನಿಯಲ್ಲಿ ಉಳಿದ ಶಾಯಿಯಂತೆ ನಾನು
ಭರ್ತಿಯಾಗದಿದ್ದರೂ ಎಸೆಯದಿದ್ದರೂ ನಿನ್ನಲ್ಲಿಯೇ ಉಳಿಯಲು ಇಚ್ಛಿಸಿರುವ ನಾನು
ಮರಳಿ ಮರಳಿ ಆಘ್ರಾಣಿಸುವ ಹೊತ್ತಿಗೆಯ ಸುಗಂಧದಂತೆ ನೀನು..!
ಬರೆದು ಬಿಡುವ ಮನಸ್ಸಾಗಿದೆ..!
ನಿನ್ನೊಲವಿನಿಂದ ಲೇಖನಿಯನ್ನು ತುಂಬಿಸು..
ಎಂದೂ ಖಾಲಿಯಾಗದ ಕೈ ಬೆರಳಿನಂತೆ ಇದ್ದು ಬಿಡು..!
ನಿನ್ನಯ ಬೆರಳುಗಳ ಸ್ಪರ್ಶಕ್ಕೆ ನಾಚುವ ಮರಳಾಗಿ ಇದ್ದು ಬಿಡುವೆ...!!
ಮಹೇಶ್. ಆರ್
೧೭/೧೨/೨೦೧೯
Comments
Post a Comment