ಅವಳೆಂದರೆ ಗಾಢಾಂಧಕಾರದಲ್ಲೂ ಹೊಳೆಯುವ ಮಿಂಚುಹುಳು.
ಅವಳೆಂದರೆ ಕಪ್ಪನೆಯ ಮೋಡ ತುಂಬಿರುವ ಬಾನು
ಮಳೆಯಾಗಿ ಸುರಿಯಬಹುದು ಅಥವಾ ಗಾಳಿಯ ಜೊತೆ ತೇಲಿ ಹೋಗಬಹುದು. ಆದರೆ ಅವಳು ಸೃಷ್ಟಿಸುವ ವಾತಾವರಣ ಇದಿಯಲ್ಲ ಅದನ್ನ ಆ ಪ್ರಕೃತಿ ಕೂಡ ಇನ್ನೊಂದು ರೂಪದಲ್ಲಿ ಜನ್ಮ ತಾಳಲು ಆಗುವುದಿಲ್ಲ. ಅವಳು ಹಾಗೆಯೇ.. ಅವಳೊಬ್ಬಳೇ ಅಸಲಿ ಮಿಕ್ಕೆಲ್ಲವೂ ಕಾಪಿ ಬರೆದ ರೀತಿ. ನೋಡಿ ಅದನ್ನೇ ಬರೆಯಬಹುದು ಆದರೆ ಅವಳನ್ನು ಬರೆಯಲಾಗದು. MASTERPIECE, DUMMY PIECE ಎಲ್ಲವೂ ಅವಳೆ. ಥೂ..! ಎಷ್ಟು ಕ್ಲೀಷೇ ಅಲ್ಲವೇ. ಅಬ್ಬಬ್ಬಾ ಎಂದರೆ 60-70 ವರ್ಷ ಬದುಕುವ ಮನುಷ್ಯ ಏಳೇಳು ಜನ್ಮದ ಮಾತಾಡುತ್ತಾನೆ. ಪ್ರತಿಬಾರಿಯೂ ಅವಳೇ ನನಗೆ ಸಿಗಲಿ ಎಂದು ಹಂಬಲಿಸುತ್ತಾನೆ. ಅದೇ ಅಲ್ಲವೇ ಪ್ರೀತಿಯ ಶಕ್ತಿ..! ಪ್ರೇಮವೆಂಬುದೇ ಹಾಗೇ ನಶೆಯಂತೆ ಏರಿಬಿಟ್ಟರೆ ಮುಗಿಯಿತು. ತಲೆ ಕೆಳಗಾಗದಿದ್ದರೂ ಪ್ರಪಂಚವೇ ಉಲ್ಟಾ. ನೆರಳಿನಂತಿರುವ ಸಾವನ್ನೂ ಲೆಕ್ಕಿಸದೇ ಅಷ್ಟೊಂದು ಪ್ರೇಮಿಸುತ್ತೇವೆ ಎಂದರೆ ಮತಿಭ್ರಮಣೆ ಅಲ್ಲದೇ ಇನ್ನೇನೂ ? ನೀವು ಎಷ್ಟೇ ವೇದಾಂತ, ಸಿದ್ಧಾಂತಗಳನ್ನು ಮಾತಾಡಬಹುದು. ನೀತಿ, ನಿಯಮಗಳನ್ನು ಹಾಕಿಕೊಂಡು ನಿಮ್ಮನ್ನ ನೀವೇ ನಿಗ್ರಹಿಸಿಕೊಳ್ಳಬಹುದು ಎಂದು ಎಷ್ಟೇ ಹಠ ಹಿಡಿದು ಕೂತರೂ ಕೊನೆಗೆ ಅದು ಪಂಕ್ಚರ್ ಆದ ಟ್ಯೂಬ್ನಂತೆ ಟುಸ್....! ನಿಮ್ಮ ಲೆಕ್ಕಾಚಾರಗಳನ್ನು ಉಲ್ಟಾ-ಪಲ್ಟಾ ಮಾಡಿ ನಿಮ್ಮನ್ನ ಸಂತೆಯಲ್ಲಿ ಕಳೆದು ಹೋದ ಮಗುವಿನಂತೆ ಮಾಡುವುದೇ ಪ್ರೀತಿ. ದಿಕ್ಕೆಟ್ಟ ಮಗುವಿಗೆ ತಾಯಿ ಸಿಕ್ಕಂತೆ ನಿಮ್ಮ ಪ್ರೇಮಿ ಸಿಕ್ಕಿ ಬಿಟ್ಟರಂತೂ ಅಕ್ಷರಶಃ ಸ್ವರ್ಗದಲ್ಲಿ ತೇಲುವಿರಿ...ಬಲೂನಿನಂತೆ. ಗಾಳಿ ಪ್ರೀತಿ ಇದ್ದ ಹಾಗೆ ಬಲೂನಿಗೆ ಗಾಳಿ ಜಾಸ್ತಿಯೂ ಆಗಬಾರದು, ಕಡಿಮೆಯೂ ಆಗಬಾರದು ಸಮತೋಲನದಲ್ಲಿರಬೇಕು. ಮನಸ್ಥಿತಿಯೂ ಸುಸ್ಥಿಯಲ್ಲಿದ್ದರೆ ನಿಮ್ಮ ಪ್ರೀತಿಯೂ ಆಕಾಶದೀಪದಂತೆ ತೇಲುತ್ತದೆ. ಅಯ್ಯೋ ಏನೇನೋ ಬರೆಯುತ್ತಿದ್ದೇನೆ. ಕೊನೆ ಗೊತ್ತಿಲ್ಲದೆ ಬರೆದರೆ ಹೀಗೆ ಬಸ್ಟಾಪ್ ಇಲ್ಲದ ಊರಿಗೆ ತಲುಪಿದಂತೆ, ತಲೆ-ಬುಡ ಇರುವುದಿಲ್ಲ. ಆದರೂ ಏನೋ ಒಂದಂತೂ ಇರುತ್ತೆ ನೋಡ್ಕೋಳಿ. ಇಷ್ಟೇಲ್ಲಾ ಪುರಾಣ ಹೇಳೋ ನಾವು ಕೂಡ ಅವಳು ನಕ್ಕಿದರೆ ಢಮಾರ್...! ಸರ್ವನಾಶ...! ಶುರುವಿನಿಂದ ಆ್ಯಡಮ್-ಇವ್ ಕಥೆ..!
Comments
Post a Comment