ಒಲವಿನ ಹುಡುಗಿಗೆ

ಅವಳೆಂದರೆ ಕಾಡು ಮಲ್ಲಿಗೆ
ಅಂಕೆಯಿಲ್ಲದೇ ಹರಿಯುವ ಗಂಗೆ
ನಿಷ್ಕಲ್ಮಶ ಮನಸ್ಸಿನ ಸುರಗಿ
ನಿನ್ನ ನೋಡುತಾ ಹೋದೆ ಕರಗಿ

ಹೇ ಹುಡುಗಿ...,
ಜಾತ್ರೆಯಾ ದೊಂಬಿಯಲ್ಲಿ ನನ್ನನ್ನು ಕೂಗಿ
ಹಿಂತಿರುಗಿ ನೋಡದೆ ಹೋದವಳು ನೀನಲ್ಲವೇ
ಸೋಲುವ ಮನಸಿದ್ದರೂ
ಗೆಲ್ಲುವ ಹಠವೇಕೆ ಹುಡುಗಿ

ನಿನ್ನ ಸಿಟ್ಟೆಲ್ಲವೂ ಮತ್ತೇರಿಸುವ
ಮುಸ್ಸಂಜೆಯಂತೆ ಎನಗೆ..
ಒಮ್ಮೆ ಕೈ ಚಾಚಿ ಬಿಡು ಬೆಡಗಿ
ದುಂಬಿ ಮಕರಂದವೂ ನಾಚಿಸುವಂತಿರೋಣ..

Comments

Popular Posts