ಚಕೋರಿ
ಸರಳ ರೇಖೆಗೂ ಸಡ್ಡು ಹೊಡೆಯುವ ಹಲ್ಲುಗಳು ರಾಶಿ
ತಂಗಾಳಿಗೂ ಮತ್ತೇರಿಸುವ ಕೇಶರಾಶಿ
ಮಧುವಿನಂತ ನಗು
ಮಗುವಿನಂತ ಮನಸ್ಸು
ತಂಗಾಳಿಗೂ ಮತ್ತೇರಿಸುವ ಕೇಶರಾಶಿ
ಮಧುವಿನಂತ ನಗು
ಮಗುವಿನಂತ ಮನಸ್ಸು
ಹ್ಮ್..,
ನನಗರಿಯದೆ ಅನಾಹುತವಾಗಿದೆ
ಸೆಳೆತ ಇನ್ನಷ್ಟು ಅತಿಯಾಗಿದೆ
ನನಗಂತೂ ನಿನ್ನ ಪರಿಧಿಯಲ್ಲಿ ಪರಿಭ್ರಮಿಸೋ ಚಾಳಿ
ನಿನ್ನ ಸೊಲ್ಲೆತ್ತಿದಾಗ ನಾನಂತೂ ಅತಿ ಎನಿಸುವಷ್ಟು ವಾಚಾಳಿ
ನೀ ಇರದೇ ನಾ.. ಲೂಟಿಯಾದ ಪೇಟಿಯಲ್ಲಿ ಉಳಿದ ಚಿಲ್ಲರೆಯಂತೆ
ಶೀಶೆಯಲ್ಲಿ ಪೇರಿಸಿಟ್ಟ ಮದಿರೆಯಂತೆ ನೀ.. ಎಂದಿಗೂ ಸೋಜಿಗ.. ಆಕರ್ಷಕ..

Comments
Post a Comment