ನಾನೆಂದಿಗೂ ಅವಳ ಸನ್ನಡೆತೆಯ ಖೈದಿ..!
ಕ್ಷಮಿಸಿಬಿಡು ಒಮ್ಮೆ ಹಠವಾ ತೊರೆದು
ಕಲ್ಲು ಬಂಡೆ ಮನಸ್ಸನ್ನು ಕೊರೆದು
ಸುಳಿಯಲ್ಲಿ ಸಿಲುಕಿ ಕೈ ಚಾಚಿರುವೆ
ಬದುಕಿಸುವ ಕರುಣೆ ತೋರಬಾರದೇ ?
ಪ್ರೇಮಿಸುವ ಹೃದಯವ ಕೊಂದರೆ
ಪ್ರೀತಿಯ ಚಿಂತೆಯು ನಿಲ್ಲುವುದೇ ?
ಹಠಮಾರಿ ಮನಸ್ಸಿಗೆ ಮುಲಾಮು ಬೇಕಿದೆ
ನೀನಿರದೆ ಈ ಜಗವು ಮಂಕಾಗಿದೆ.
Comments
Post a Comment