ಸುಡುವ ಸುರಗಿ
ಅವಳ ಪ್ರೇಮವೇ ಹಾಗೇ
ಜೀವಂತ ಜ್ವಾಲಾಮುಖಿಯಂತೆ
ಯಾರ ತಂಟೆಗೂ ಹೋಗದ ನೀಲ ಆಕಾಶದಂತೆ
ಆದರೆ ಅವನ ಹತ್ತಿರ ಯಾರಾದರೂ ಸುಳಿದರೂ
ಹೆದ್ದಾರಿಯ ಯಮರೂಪಿ ಲಾರಿಯಾಗುವಳು
ಸಾವನ್ನ ಹಂಚುವ ಸುನಾಮಿಯಾಗುವಳು
ಊರನ್ನು ಸುಡುವ ಅಗ್ನಿ ಮಳೆಯಾಗುವಳು
ಅವನಿಗೂ ಕ್ಷಾಮದಂತೆ ಎರಗುವಳು
ಎಲ್ಲವನ್ನು ನಿರ್ನಾಮ ಮಾಡಿ ಬಿಕ್ಕುವ ಮಗುವಾಗುವಳು
ಕೊನೆಗೆ ಅವನ ಭುಜಕ್ಕೊರಗಿ ಶೋಕ ಸಾಗರದಲ್ಲಿ ಮುಳುಗುವಳು.
Comments
Post a Comment