ಬಿಡಲಾರೆ ನಿನ್ನನು, ಸಲೀಸಾಗಿ ನಾನು
ಈ ಸಾಲು ಅವಳು ನನಗಾಗಿ ಮುಡುಪಿಟ್ಟಿರುವುದು. ಅವಳಿಗೆಷ್ಟೇ ನೋವಾದರೂ ಸಹಿಸಿಕೊಂಡು ಪ್ರೀತಿಯನ್ನು ಉಳಿಸಿಕೊಳ್ಳಲು ರಣಚಂಡಿಯಾಗುವಳು.
ಅವಳಿಗಾಗಿಯೇ ಎದೆಯಲ್ಲೊಂದು ಕವಿತೆ ಇದೆ..
ಬರೆಯದ ಸಾಲುಗಳಿವೆ
ಕಾಡಿಸು ನನ್ನನ್ನು ಮೌನದಂತೆ
ಮೋಹಿಸು ನನ್ನನ್ನು ಇಬ್ಬನಿಯಂತೆ
ಕಾಪಾಡು ನನ್ನನ್ನು ಮಗುವಿನಂತೆ
ಸಹಿಸಿಕೋ ನನ್ನನ್ನು ತಾಯಿಯಂತೆ
ಅವಳಿಲ್ಲದ ಸ್ವಾತಂತ್ರ್ಯವೇಕೆ ?
ಎಂದಿಗೂ ಅವಳ ಸನ್ನಡೆತೆಯ ಖೈದಿಯಾಗುವ ಬಯಕೆ
ದೇವರಲ್ಲಿ ಬೇಡಿಕೊಳ್ಳೋದು ಇಷ್ಟೇ.. ಅವಳ ಕೋಪ ಕಡಿಮೆ ಮಾಡಬೇಡ. ನನಗೆ ಅದನ್ನ ತಡೆದುಕೊಳ್ಳೋ ಶಕ್ತಿ ಕೊಡು.
Comments
Post a Comment