ಜೋಲಿಯಲಿ ಬುಬುಮರಿ

ಕೇಳದೇನು ಈ ಮೌನದ ಕೂಗು 

ಮೊದಲಿಗಿಂತ ಬೇಕು ಇನ್ನೂ ನೀನು

ಅರೆಬೆಂದ ಮಡಿಕೆ ನಾನು ಅರಿವಿನಲಿ 

ಕಾಯಿಸು ನನ್ನನ್ನು ಪ್ರೀತಿಯಾ ಬೆಂಕಿಲಿ

ನೀನಿಟ್ಟ ಬಿಂದಿ ಕನ್ನಡಿಯೊಳಗಿಂದ ಕೈ ಚಾಚಿದೆ

ನೀನಾವರಿಸಿದ ಮೇಲೆ ದೇಹದ ಸೆಳವು ಹೆಚ್ಚಾಗಿದೆ

ನಿದಿರೆಯ ಮಂಪರಿನಲ್ಲಿ ನಿನ್ನ ಮುದ್ದಿಸುವ ಹುಚ್ಚಾಗಿದೆ

ಇರುಳ ಜ್ವರದಂತೆ ಮೈಯೊಳಗೆ ಕಾವೇರುತಿದೆ

ಅವಳು ಸ್ವಪ್ನದಲಿ ಸೋಕಿದರೂ ನಾಚಿ ನೀರಾಗುವ ನಾನು

ವಾಸ್ತವದಲಿ ತಾಕಿದರೆ ನದಿಯಾಗಿ ಹರಿಯದೇ ಬೇರೆ ಉಪಾಯವಿಲ್ಲ

ತೂಗುಯ್ಯಾಲೆಯಲ್ಲಿ ಅಂಗಾತ ವಿರಮಿಸಿ ನಕ್ಷತ್ರ ಎಣಿಸುವೆಯ 

ರಟ್ಟೆ ಸೋಲುವವರೆಗೂ ಮನಸು ಚಿಟ್ಟೆಯಾಗುವವರೆಗೂ ಜೋಲಿಯಲ್ಲಿ ಸಲಹುವೆ

Comments

Popular Posts