ಖಾಸಾ ಖಜಾನೆ
ಹೃದಯದಲಿ ಜಂಟಿ ಖಾತೆ ತೆರೆಸಿ
ವ್ಯವಹರಿಸದೆ ಹೋದರೆ ಹೇಗೆ
ರಿಯಾಯ್ತಿ ಬಡ್ಡಿ ದರದಲ್ಲಿ
ಪ್ರೀತಿಯಾ ಸಾಲ ನೀಡುವೆಯಾ
ಕೊನೆವರೆಗೂ ತಪ್ಪದೇ ಮರು ಪಾವತಿ ಮಾಡುವೆ
ನಿವ್ವಳ ಲಾಭ ಹೆಚ್ಚಾಗುವಂತೆ
ಪ್ರೀತಿಯ ವಹಿವಾಟು ಹುಚ್ಚಾಗುವಂತೆ
ನಿನ್ನ ಪ್ರೀತಿಯ ಅಸಲು ಹಾಗೆ ಇರಲಿ..
ನೀನೆಂದಿಗೂ ನಾ ತೀರಿಸಲಾಗದ ಮೊತ್ತ
ನಾನೆಂದಿಗೂ ನಿನ್ನ ಸುಸ್ತಿದಾರ
Comments
Post a Comment