ನಾ ಅವಳಾಗಬೇಕಿತ್ತು
ನಾ ನಿನ್ನ ಕಾಡಿಗೆಯಾಗಬೇಕಿತ್ತು.. ನಿನ್ನ ಕಣ್ಣಿನ ಹೊಳಪನ್ನು ಇನ್ನೂ ಸಮೀಪದಿಂದ ಸವಿಯಬಹುದಿತ್ತು...
ನಾ ನಿನ್ನ ಕಿವಿಯೋಲೆಯಾಗಿರಬೇಕಿತ್ತು.. ನೀನೆಷ್ಟು ಚೆಂದ ಅಂತ ಇನ್ನೂ ಹತ್ತಿರದಿಂದ ಹೇಳಬಹುದಿತ್ತು..
ನಾ ನಿನ್ನ ನಗುವಾಗಬೇಕಿತ್ತು.. ನಿನ್ನ ತುಟಿಯಂಚಲ್ಲೇ ಡೇರೆ ಹಾಕಬಹುದಿತ್ತು..
ನಾ ನಿನ್ನ ದರ್ಪಣವಾಗಿರಬೇಕಿತ್ತು.. ನೀನೆಂಥಾ ಅಪ್ಸರೆ ಅಂತ ನಿನಗೆ ತೋರಿಸಬಹುದಿತ್ತು..
ನಾ ನಿನ್ನ ದಿಂಬಾಗಿರಬೇಕಿತ್ತು.. ನಿನ್ನೆಲ್ಲಾ ಅಳು-ನಗುವಿಗೂ ಜೊತೆಯಾಗಬಹುದಿತ್ತು..
ನಾ ನಿನ್ನ ಕೊಣೆಯಾಗಿರಬೇಕಿತ್ತು.. ನಿನ್ನೆಲ್ಲಾ ಖಾಸಗಿತನಕ್ಕೆ ಸಾಕ್ಷಿಯಾಗಬಹುದಿತ್ತು..
ನಾ ನಿನ್ನ ಆತ್ಮವಾಗಿರಬೇಕಿತ್ತು.. ಸದಾ ನಿನ್ನೊಳಗೆ ಒಂದಾಗಬಹುದಿತ್ತು...
ನಾ, ನೀನೇ ಆಗಬೇಕಿತ್ತು.. ನಿನ್ನನ್ನು ಇನ್ನೂ ಅಗಾಧವಾಗಿ ಆವರಿಸಬಹುದಿತ್ತು...
Comments
Post a Comment