ನೀನಿರದೇ
ಎಷ್ಟು ದೂರ ಹೋದರೇನು ?
ನಿನ್ನಲ್ಲಿಯೇ ಅಡಗಿ ಕೂತಿರುವ ಚೋರ ನಾನು
ಎಷ್ಟು ಕೋಪದಿಂದ ಉರಿದರೇನು ?
ನಿನ್ನಲ್ಲಿಯೇ ಬೆಣ್ಣೆಯಂತೆ ಕರಗುವೆ ನಾನು
ಎಷ್ಟು ಮಾತು ಬಿಟ್ಟರೇನು ?
ನಿನ್ನೆದೆಯ ಪಿಸುಮಾತನ್ನು ಸದಾ ಕದ್ದಾಲಿಸುವ ಖದೀಮ ನಾನು
ಎಷ್ಟು ಉಗಿದರೇನು ?
ನಿನ್ನೆಲ್ಲಾ ಬೈಗುಳಗಳಿಂದ ಪುಷ್ಪಾರ್ಚನೆ ಮಾಡಿಸಿಕೊಂಡ ದೇವರಿನಂತೆ ನಾನು
ಎಷ್ಟು ಶಿಕ್ಷೆ ಕೊಟ್ಟರೇನು ?
ನಿನ್ನೆಲ್ಲಾ ದಂಡನೆಯನ್ನು ಹಿಗ್ಗಿನಿಂದ ಅನುಭವಿಸುವ, ನಿನ್ನಯ ಸನ್ನಡತೆಯ ಖೈದಿ ನಾನು
ಎಷ್ಟು ಜನರಿದ್ದರೇನು ಲೋಕದಲಿ ?
ನೀನಿರದೇ ಜಗವೆಲ್ಲಾ ಖಾಲಿಯಾದ ತೆಂಗಿನ ಚಿಪ್ಪಿನಂತೆ ಎನಗೆ
ಎಷ್ಟು ಧೈರ್ಯವಿದ್ದರೇನು ?
ನೀನಿರದೇ "ಈ ಜೀವನ ಸಾಕು" ಎನಿಸಿ ಧೃತಿಗೆಡುವ ಮುಂಚೆ, ಮತ್ತೆ ಬಂದು ಮೊಕದ್ದಮೆ ಹೂಡು.
ಇಂತಿ,
ನಿನ್ನಯ ವಿಚಾರಣಾಧೀನ ಖೈದಿ
Comments
Post a Comment