ಸುಪ್ತ ಸಾಗರ
ಸಾಗರದ ಹಂಗು ತೊರೆದು
ನದಿ ಇರಬಲ್ಲದೇ ?
ಅವಳ ಹಂಗು ತೊರೆದು
ನಾನು ಬದುಕಬಲ್ಲನೇ ?
ಸಾಧ್ಯವೇ ಇಲ್ಲ, ನದಿಯ ದಿಕ್ಕು
ಬದಲಾದರೂ ಗುರಿ ಬದಲಾಗದು
ಅದು ಎಂದಿಗೂ ಸಮುದ್ರದ ಸ್ವತ್ತು.
ಘಟ್ಟದೊಳಗೆ ಹುಟ್ಟಿದ ತೊರೆಗೂ
ಸುಪ್ತ ಸಾಗರಕ್ಕೂ ಎಲ್ಲಿಂದೆಲ್ಲಿಯ ಬಂಧ
ಇಲ್ಲಿ ಯಾವುದೋ ನಿರಪೇಕ್ಷ ಜೀವಿಗಳ ನಡುವೆ
ಇರುವ ನನಗೂ ಅವಳಿಗೂ ಎಲ್ಲಿಯ ಸಂಬಂಧ
ಹರಿಯುವ ನೀರಿಗಿರುವ ನಂಬಿಕೆಯೊಂದೇ
ದೇಶಾಂತರಿಯಾಗಿರುವ ನನ್ನ ನಂಬಿಕೆಯೊಂದೇ
ಪ್ರೀತಿ..!!
ಮತ್ತೆ, ಈ ಅಂತರಕ್ಕಿರುವ ಉಪಾಯವೇನು ?
ಈಗ ಇಬ್ಬರಿಗೂ ಉಳಿದಿರುವುದೊಂದೇ ದಾರಿ
ಅವಳು ಹರಿದು ಬರುವ ಹಾದಿ ಕಾಯುವುದಷ್ಟೇ..
Comments
Post a Comment