ಮೂರು ಫೂಟಿನ ಚೆಲುವೆ
ಯಾರೀ ಪುಟ್ಟ ಪೋರಿ
ಸಮುದ್ರದ ಎದುರು ಕಾಲು ಚಾಚಿ ನಿಂತ ಬೆಡಗಿ
ಅಲೆಗಳಿಗೂ ಅವಳ ಪಾದ ಮುಟ್ಟುವ ತವಕ
ನಗುವಿನಲ್ಲೇ ನೀಲ ಆಕಾಶಕ್ಕೂ ಸಡ್ಡು ಹೊಡೆವ ಸುರಗಿ
ಕನ್ನಡಕ ತೆಗಿಯಬೇಡ ಚೆಲುವೆ, ಸೂರ್ಯ ಕೂಡ ಕಣ್ಣು ಹೊಡೆದಾನು
ಅಂಗಾಲನ್ನು ಸ್ಪರ್ಶಿದ ಮರಳು ಮಂದಹಾಸ ಬಿರುತ್ತಿರುವವು
ಕಣ್ಣಿನೊಳಗೆ ಸಂಜೆಯ ನಕ್ಷತ್ರಗಳು ಹೊಳೆಯುವವು
ಇವಳನ್ನು ಕಂಡು ನಕ್ಷತ್ರಗಳು ನಾಚಿ ಮೋಡದೊಳಗೆ ಮರೆಯಾದವು
ಕೆನೆ ಬಣ್ಣದ ಫ್ರಾಕ್ ಹಾಕಿದ ಈ ಚಿಟ್ಟೆಯನ್ನು ಕಂಡು ಅಸಲಿ ಚಿಟ್ಟೆಯು ಮಾಯವಾದವು
ಇವಳಂದವ ಕಂಡು ಕೈಯಲ್ಲಿರುವ ಗಡಿಯಾರ ಕೂಡ ಸ್ಥಬ್ಧವಾಗಿರುವುದು
ಕ್ಷಣಗಳೇ ನಿಂತು “ಇನ್ನೂ ಸ್ವಲ್ಪ ನೋಡುವೆವು” ಎಂದು ಬೇಡಿಕೊಳ್ಳುವಂತೆ
ಅವಳ ನಡಿಗೆಯಲ್ಲೊಂದು ಮೌನ ಸಂಗೀತವಿದೆ, ಹೃದಯ ಕೇಳುವ ರಾಗವಿದೆ, ಕಿವಿಗೆ ಕೇಳದ ಮಧುರ ಆಲಾಪವಿದೆ
ಸಮುದ್ರವೂ ತನ್ನ ಗಂಭೀರತೆಯನ್ನು ಬಿಟ್ಟು ಇವಳ ಮುಂದೆ ಮಗುವನ್ನು ಆಡಿಸುವಂತೆ ಚಿನ್ನಾಟ ಆಡುತ್ತಿದೆ
ಇವಳನ್ನು ಹೊತ್ತು ನಿಂತ ಭೂಮಿಯೇ ಭಾಗ್ಯವತಿ
ಇಂಥಾ ಸುಂದರಿಯನ್ನು ಹಡೆದ ನನ್ನತ್ತೆಗೆ ಸಾವಿರ ಸಲಾಮು
ಒಂದು ಕ್ಷಣದ ಸೌಂದರ್ಯವಲ್ಲ ಈ ಚೆಲುವು, ಕಾಲಕ್ಕೂ ಮೀರಿದ ಕವಿತೆಯಂತೆ ಇವಳು
ಆದರೂ ನನ್ನಾಕೆ ಒಂದು ಕೊರಗು "ಇನ್ನರ್ಧ ಅಡಿ" ಇರಬೇಕಿತ್ತು ಎಂದು. (ಇದಕ್ಕೆ ಹೊಡೆಯೋ ಹಾಗಿಲ್ಲ)
Comments
Post a Comment