ಗುಜುರಿಯ ಮುಖವಾಡ
ಅವಳನ್ನೇ ಹುಡುಕುತಿರುವೆ ಎಲ್ಲರಲ್ಲೂ
ಮುಖವಾಡ ತೊಟ್ಟವರೇ ಇಲ್ಲಿ ಎಲ್ಲರೂ
ಅವಳು ಮುಖವಾಡ ಧರಿಸಿದ್ದರೆ ಎನ್ನುವ
ಆತಂಕ ಕಾಡುತಿರುವುದು ಮನದಿ..!
ಗುಜುರಿಯ ಸಾಮಾನುಗಳ ನಡುವೆ
ಪಣಕ್ಕಿಟ್ಟಿರುವೇ ಪ್ರೀತಿಯನ್ನು.......
ಹರಾಜು ಕೂಗಲಾರದೆ ಗಂಟಲು ಕಟ್ಟಿದೆ
ಬಿಕರಿಯಾಗದೆ ಭಿಕಾರಿಯಂತಾದ ಪ್ರೀತಿಯನ್ನು
ಕಾಡುತಿಹುದು ಅನಾಥ ಪ್ರಜ್ಞೆ...!
-ಮಹೇಶ್.ಆರ್
11/05/2017
Comments
Post a Comment