ಸುಳ್ಳೇ ಸುಳ್ಳು

ಹೀಗೇ..ಗೆಳತಿಯ ಫೇಸ್‌ಬುಕ್‌ ಸ್ನೇಹಿತರ ಲಿಸ್ಟ್ ನಲ್ಲಿ ಹುಡುಗೀರನ್ನ ನೋಡ್ತೀದ್ದೆ. ಯಾರ್ಗೇ ರೀಕ್ವೆಸ್ಟ್ ಕಳ್ಸಣ ಅಂತ ಹುಡುಕ್ತಿದ್ದೆ. ಆವಾಗ ಸಿಕ್ದೋಳೇ ಸಹನಾ.. ಆಹಾ..! ಎಂಥಾ ಮುದ್ದಾದ ಹೆಸರು. ಆದ್ರೆ ಆಡೋದು ಮಾತ್ರ ಸೂರ್ಪಣಕಿ ತರ. ಹಂಗೂ ಹಿಂಗೂ ಫ್ರೇಂಡ್ಸ್ ಆದ್ವಿ. ಮೇಡಮ್ಗೇ ಲವ್ವು ಗಿವ್ವು ಆಗಲ್ಲ. ನಮ್ಗೇ ಪೋಲಿಸ್ ಕಂಡ್ರೆ ಆಗಲ್ಲ(ಭಯ). ನನ್ನ ಹಣೆ ಬರಹಕ್ಕೆ ಅವಳಪ್ಪ ಪೋಲಿಸ್ ಆಗಿರ್ಬೇಕೆ... ಸರ್ವನಾಶ ಆಯ್ತು ಅನ್ಕೋಂಡೆ. ಮಾತಾಡ್ಸಿದ್ರೆ ಪೈಲ್ವಾನ್ ತರ ಎಗ್ರಿ ಎಗ್ರೀ ಬೀಳೋಳು. ಇವ್ಳಗೆ ಎಷ್ಟು ಕಾಳು ಹಾಕುದ್ರು ಬೀಳಲ್ಲ ಹಾಳ್ಬಿದ್ದೋಗ್ಲಿ ಅಂತ ತೆಪ್ಪಗಾದೆ. ಇದ್ದಕ್ಕಿದ್ದಂತೆ ಅವರಪ್ಪ ಹೊಗೆ ಹಾಕಿಸ್ಕೋಬಿಡೋದಾ.. ನಂಗೆ ಅಯ್ಯೋ ಪಾಪ ಅನಿಸ್ತು. ನನ್ನ ಗೆಳತಿ ಹತ್ರ ಅವಳ ಬಗ್ಗೆ ನೊಂದುಕೊಂಡು "ಹೀಗಾಗ್ಬರ್ದಿತ್ತು" ಅಂತ ಮಾತಾಡ್ದೆ. ಒಂದೆರಡು ದಿನ ಆದ್ಮೇಲೆ ಸಹನಾನೇ ಕರೆ ಮಾಡಿದ್ಲು. ನಾನು ಸೈಲೆಂಟಾಗೆ ಮಾತಾಡ್ತೀದ್ದೆ.. " ನಂಗೆ ಬೇಜಾರ್ ಆಗ್ತಿದೆ ನಗ್ಸು ಅಂದ್ಲು" ಆವತ್ತು ಶುರು ಹಚ್ಕೋಂಡಿದ್ದು ನಗ್ಸೋಕೆ, ಮೂರು-ನಾಲ್ಕು ತಿಂಗ್ಳು ನಕ್ಕು ನಕ್ಕು... ನಂಗೂ ಅರಾಲ್ಡೆಡ್ ತರ ಅಂಟಿಕೊಂಡು ಬಿಟ್ಳು. ಆಮೇಲೆ ನಾನು ಪ್ರಪೋಸ್ ಮಾಡಿದೆ. ನನಗೆ ಇಷ್ಟ ಇಲ್ಲ ಇಷ್ಟ ಇಲ್ಲ ಅಂತ್ಲೇ ನನ್ನ ಜೊತೆ ಸುಮಾರು ಮುನ್ನೂರು ಸಲ ಬ್ರೇಕಪ್ ಮಾಡ್ಕೋಂಡು ಮಾತು ಬಿಡ್ತಿದ್ಲು. ಇದೆಲ್ಲಾ ಅವರಮ್ಮನಿಗೆ ಗೊತ್ತಿತ್ತು. ಆಗಿದ್ದು ಆಗ್ಲಿ ಅಂದು, " ಅತ್ತೆ ನಿಮ್ಮ ಮಗ್ಳು ಇಷ್ಟ. ನಾನು ಸಾಯೋವರ್ಗೂ ಅವರಪ್ಪನ ನೆನಪಾಗ್ದೆ ಇರೋ ಹಾಗೇ ನೋಡ್ಕೋತೀನಿ. ಮದ್ವೆ ಮಾಡ್ಕೋಡ್ತೀರ " ಅಂದೆ. ನನ್ನ ಒಪ್ಪಿಗೆ ಇರ್ಲಿ. ಮೊದ್ಲು ಅವಳನ್ನು ಒಪ್ಸು ಅನ್ನೋದಾ.. ಇವ್ಳಿಗೆ ನಾನು ಹೇಳಿ ಹೇಳಿ ಸಾಕಾಗಿ, " ಅತ್ತೆ ನಿಮ್ಮ ಮಗ್ಳು ಸಹವಾಸ್ವೇ ಬೇಡ " ಅಂತೇಳಿ ಫೋನ್‌ ಇಟ್ಟೆ. ನಂತರ ಅವರಮ್ಮ " ಈ ಕ್ರಾಕ್ನ ಯಾರು ಕಟ್ಕೋತಾರೆ " ಎಂದು ನಂಗೆ ಧಾರೆ ಎರೆದು ಕೊಟ್ರು. ನಂಗೀಗ ಒಬ್ಳು ಮಗ್ಳು ಇದಾಳೆ. ಸಹನಾ ನನ್ನ ಪ್ರೀತಿನ ಇನ್ನೂ ಒಪ್ಕೋಂಡಿಲ್ಲ... ಡೈಲಿ ಕಿರಿಕ್ಕು... ಆದ್ರೂ ಫೆವಿಕಾಲ್ ತರ ಅಂಟ್ಕೋತಾಳೆ.

                    ‌        ******
ಮಹೇಶ್. ಆರ್
೦೫-೦೨-೨೦೧೮
amaheshr@gmail.com
9738500671

Comments

Popular Posts