ಮುದ್ದು ಮೋಹಿನಿ

ಬಣ್ಣದ ಸೀರೆಯುಟ್ಟ ಮುದ್ದು ಮೋಹಿನಿಯೇ 

ಕಾಮನಬಿಲ್ಲಿಗೇಕೆ ಸ್ಪರ್ಧೆಯನ್ನೊಡ್ಡುವೆ 

ಚೂರು ನಿನ್ನ ರಂಗನ್ನು ಕೊಡುವೆಯಾ 

ನವಿಲುಗರಿಯ ಮೇಲೆ ಚಿತ್ರಿಸಬೇಕಿದೆ 

ನಡುವೆ ಅಂತರವೆಷ್ಟು ಘೋರ ಸಖಿ 

ಸನಿಹ ಬಂದು ಸೀರೆ ನೆರಿಗೆ ಸರಿ ಮಾಡಲೇ 

ಆಗಲಾದರೂ ನನ್ನ ತಲೆ ಸರಿ ಹೋಗಬಹುದೇನೋ 

ಉಹೂಂ..,

ಸೀರೆಯುಟ್ಟ ದೇವತೆ ಎದುರಾದರೇ ಏನನ್ನು ಹೇಳಲಿ 

ಹೊಗಳಲು ಕವಿತೆ ಸಾಲದು 

ಸುಮ್ಮನೆ ದೃಷ್ಟಿ ತೆಗೆದು ಕಾಡಿಗೆ ಹಚ್ಚಲೇ

Comments

Popular Posts