ಕಪ್ಪು ಬಿಂದಿ ಹುಡುಗಿ

ಅವಳನ್ನು ಬಿಂದಿಯಲ್ಲಿ ನೋಡಿದಾಗೆಲ್ಲಾ ನಿದಿರೆ ಮಾಯವಾಗುವುದು 

ನನ್ನ ಉಸಿರ ಏರಿಳಿತಕ್ಕೆ ಕಾಲ್ಗೆಜ್ಜೆ ಕಟ್ಟಿದಂತಾಗುವುದು 

ಅವಳು ಬಿಂದಿ ಇಟ್ಟಾಗಲೆಲ್ಲಾ ಝಲ್ ಎನ್ನಲು ಶುರುವಾಗುವುದು 

ಬಿಂದಿಯಲ್ಲಿ ಅವಳನ್ನು ನೋಡುವುದೇ ನನಗೊಂಥರಾ ಖಯಾಲಿಯಾಗಿರುವುದು 

ಬಿಂದಿ ಇಡುವಾಗ ಅವಳಿಗೆ ಕನ್ನಡಿಯಲ್ಲಿ ಮುತ್ತಿಡುವುದೇ ಖಾಸಗಿ ಚಾಕರಿಯಾಗಿರುವುದು 

ನಾನು ಏನೇ ಕೊಟ್ಟರೂ ಅವಳಿಗೆ ಖುಷಿಯಾಗದು 

ನಿನ್ನ ಯೋಗ್ಯತೆಗೆ ಒಂದು ಸ್ಟಿಕರ್ ಪ್ಯಾಕೆಟ್ ಇಲ್ಲ ಎಂದು ಕಾಲೆಳೆಯುವಳು

ನಾನು ಎಷ್ಟು ಹುಡುಕಿದರೂ ಅವಳು ಹೇಳಿದ ಬಿಂದಿ ಸಿಗದು 

ಸಿಕ್ಕರೂ, ಅಳತೆ ಸರಿ ಹೋಗದು 

ಕೊಟ್ಟರು, ಅವಳ ಹತ್ತಿರವಿರುವ ಬಿಂದಿಯೊಂದಿಗೆ ಹೋಲಿಕೆ ಮಾಡಿ ಇದಲ್ಲ ಎಂದು ಜಗಳ ಶುರು ಮಾಡುವಳು

ನನಗೂ ಅದೇ ಬೇಕು.. ಅವಳಿಗೂ ಅದೇ ಬೇಕು

ನಮ್ಮಿಬ್ಬರ ಜಗಳ ಪ್ರೀತಿಯನ್ನು ಜೀವಂತ ಇಡುವ ಜ್ವಾಲಾಮುಖಿಯಂತೆ

ಪ್ರತಿ ಸಲವೂ ಅವಳು ಬಿಂದಿಯನ್ನು ಸೊಟ್ಟಗಿಡುವಳು

ಅದನ್ನ ಸರಿ ಮಾಡುವುದೇ ನನ್ನ ಪ್ರೀತಿಯ ಇನ್ನೊಂದು ಮಜಲು

ಏ ಜೀವ ಸಖಿ ಈ ಆತ್ಮ ಇರುವರೆಗೂ ನಿನಗೆ ಶರಣಾಗುವೆ 

ನಾನೆಂದಿಗೂ ನಿನ್ನ ಮಾಫಿ ಇಲ್ಲದ ಸಜಾ ಖೈದಿಯಾಗಿರುವೆ


Comments

Popular Posts