ಜೀವ ಸಖಿ
ಅವಳ ನಗು ನೋಡಿ
ಇಬ್ಬನಿ ನಾಚುವುದು
ಅವಳ ನಡಿಗೆ ನೋಡಿ
ನದಿಯು ಎಡವುದು
ಅವಳ ನಾಸಿಕ ನೋಡಿ
ಸಂಪಿಗೆ ಅರಳವುದು
ಅವಳು ನಿಟ್ಟುಸಿರು
ಇಂಪಾದ ಗಾಳಿ ಹಾಡಿನಂತೆ
ಅವಳ ಪಿಸುಮಾತು
ನಶೆಯೇರಿಸುವ ಮದಿರಿಯಂತೆ
ಅವಳ ಕುಡಿ ನೋಟ
ಹೃದಯಕ್ಕೆ ಮೌನ ರಾಗ ಹಿಡಿಸಿದಂತೆ
ಅವಳ ಅಂದ ನೋಡಿ
ಒಲವು ಸಂಜೆ ಜ್ವರದಂತೆ ಇಮ್ಮಡಿಯಾದಂತೆ
ಅವಳಿಲ್ಲದ ಗಳಿಗೆ
ಭೂಮಿಕೆ ಇಲ್ಲದ ರಂಗಭೂಮಿಯಂತೆ
ಅವಳ ಜೊತೆಗಿರೋ ಕ್ಷಣ
ಮರುಭೂಮಿಯ ಹೂವಿನಂತೆ
ಅವಳು ಕವಿತೆಯಲ್ಲ,
ಆಕೆ ಪದ್ಯದ ಒಳಗಿನ ಜೀವ
ನಾನು ಬರೆವ ಎಲ್ಲಾ ಸಾಲುಗಳಲ್ಲೂ
ಅವಳ ಉಸಿರಿನ ಹಾದಿ ಇದೆ
ಹೇ.., ಜೀವಸಖಿ,
ನಿನಗೆ ನಾನು ಏನನ್ನು ಕೊಡಲಿ?
ಈ ಜನ್ಮ ? ಸಾಲದು
ಈ ಹೃದಯ ? ಸಾಲದು
ನನ್ನೆಲ್ಲಾ ಖುಷಿ ? ಸಾಲದು
ಭರವಸೆ ಕೊಡುವೆ,
ನಿನ್ನ ವಿನಹಃ
ಕನಸಲು ಸಹ ಇನ್ನಾರ ಸಮೀಪವು ಸುಳಿಯುವುದಿಲ್ಲ.
ಮೊದಲಿಂದ ಮೋಹಿಸುವೆಯಾ ?
ಶುರುವಿನಿಂದ ಶರಣಾಗುವೆ.
Comments
Post a Comment