ಅವಳೊಂದು ಶಕ್ತಿ
"ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು"
ಈ ಸಂದರ್ಭದಲ್ಲಿ ನನಗೆ ಅನಿಸಿದ ಕೆಲವು ವಿಚಾರಗಳನ್ನ ಹೇಳ್ತೀನಿ. ತಪ್ಪಾಗಿದ್ದರೆ ಮನ್ನಿಸಿ.
ಮೊದಲಾಗಿ ನನಗೆ ಈ ಮಹಿಳಾ ದಿನಾಚರಣೆ ಅಂತ ಮಾಡೋದೇ ಒಂದು ಅಸಂಬದ್ಧ ಅನಿಸುತ್ತದೆ.
ಕಾರಣ...., ಪ್ರತಿ ದಿನ, ಪ್ರತಿ ಕ್ಷಣ, ಒಳಗು - ಹೊರಗೂ ದುಡಿಯುವ ಹೆಣ್ಣನ್ನ ಕೇವಲ ಒಂದು ದಿನದ ಮಟ್ಟಿಗೆ ಗೌರವಿಸಿದರೇ ಎಷ್ಟು ಸರಿ....!?
ಹೆಣ್ಣನ್ನ ಪ್ರತಿದಿನ, ಪ್ರತಿಕ್ಷಣ ಗೌರವಿಸಬೇಕು. ಹಾಗೇ ಹೆಣ್ಣು ಅಂತ ವರ್ಗೀಕರಿಸಿ, ಅವಳಿಂದ ಈ ಕೆಲಸ ಆಗಲ್ಲ. ಇದನ್ನ ಮಾಡೋದಕ್ಕೆ ಗಂಡು ಬೇಕು ಅಂತ ಹೇಳುವುದು ಮೂರ್ಖತನ ಅಲ್ಲವೇ....!?
ಆ ಗಂಡನ್ನ ಸೃಷ್ಟಿಸಿದ್ದೆ ಈ ಹೆಣ್ಣು ಅನ್ನೋದು ನೆನಪಿರಲಿ.....
ಭೂಮಿಯಲ್ಲಿ ಬೀಜ ಬಿತ್ತೋದು ಸುಲಭ. ಆ ಬೀಜಕ್ಕೆ ನೀರುಣಿಸಿ, ಗೊಬ್ಬರ ಕೊಟ್ಟು ತನ್ನ ಒಡಲಿನೊಳಗಿಟ್ಟು ಬೆಳೆಸುತ್ತಾಲ್ಲ ಭೂತಾಯಿ ಅವಳು ಶ್ರೇಷ್ಟ.
ಭೂತಾಯಿ ಅಂದರೆ ಪ್ರಕೃತಿ.
ಪ್ರಕೃತಿ ಅಂದರೆ ಹೆಣ್ಣು.
ಹೆಣ್ಣೆಂದರೇ ಕೇವಲ ಹೆಣ್ಣಲ್ಲ, ಅವಳೊಂದು ಶಕ್ತಿ.
ಹೆಣ್ಣು ಎಲ್ಲಾ ವಿಚಾರಗಳಲ್ಲೂ ಗಂಡಿಗೆ ಸರಿಸಮಾನಳು.
ಮಹಿಳಾ ಸಬಲೀಕರಣವಾಗಬೇಕೆಂದರೇ,
* ಹೆಣ್ಣು ವಿದ್ಯಾಭ್ಯಾಸ ಮಾಡಬೇಕು.
* ಕಲಿಕೆಯೊಂದೆ ಮೂಲ ಮಂತ್ರವಾಗಬೇಕು.
ಹೆಣ್ಣು ಕಲಿತರೆ, ತನ್ನನ್ನೇ ಮಾರಿಕೊಂಡು ಬದುಕುವ ದಾರಿದ್ರ್ಯ ವೃತ್ತಿಗೆ ಇಳಿಯಲಾರಳು.
* ಹೆಣ್ಣು ಅವಳನ್ನು ಬೇರೆಯವರು ಗೌರವಿಸಬೇಕು ಎನ್ನುವ ಮೊದಲೇ ತನ್ನನ್ನ ತಾನು ಗೌರವಿಸಬೇಕು.
* ಹೆಣ್ಣಿಗೆ ಹೆಣ್ಣೆ ವೈರಿಯಂತೇ, ಆ ಮಾತಿಗೆ ತದ್ವಿರುದ್ಧವಾಗಿ ನಿಂತು ಭ್ರೂಣ ಹತ್ಯೆಯನ್ನು ತಡೆಯಬೇಕು.
* ಎಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಅಲ್ಲಿ ದೇವರಿರುತ್ತಾನೆ.
ಹೆಣ್ಣನ್ನ ಪೂಜಿಸೋದು ಬೇಡ. ಗೌರವಿಸಿ, ಪ್ರೀತಿಸಿ, ರಕ್ಷಿಸಿ, ಸಮಾನವಾಗಿ ಕಾಣಿ.
ಗಾಂಧಿ ಕಂಡ ಕನಸು. ಹೆಣ್ಣು ಒಬ್ಬಂಟಿಯಾಗಿ ಮಧ್ಯರಾತ್ರಿಯಲ್ಲಿ ನಡೆದಾಡುವಂತಾಗುವ ರಾಮರಾಜ್ಯ....
ರಾಮರಾಜ್ಯವಾಗಬೇಕು ಎಂದರೆ ದುಷ್ಟ ರಾವಣರ ಸಂಹಾರವಾಗಬೇಕು.
ಯಾರು ಯಾರನ್ನೂ ಸಂಹರಿಸುವುದಕ್ಕೆ ಆಗುವುದಿಲ್ಲ. ಕೊಂದರೂ ಕೇವಲ ದೈಹಿಕವಾಗಿ ಅಷ್ಟೇ.
ನಿಮ್ಮೊಳಗಿರುವ ರಾವಣನನ್ನು ನೀವೇ ಸಂಹರಿಸಿ.
ಪರಸ್ತ್ರೀಯನ್ನು ತಾಯಿ, ತಂಗಿ, ಅಕ್ಕ, ಸ್ನೇಹಿತೆಯಂತೆ ಗೌರವಿಸಿ.....
ಹೆಣ್ಣು ಕೂಡ ಅಷ್ಟೇ ತನ್ನಲ್ಲಿರುವ ಸಂಕುಚಿತ ಭಾವನೆ ಬಿಟ್ಟು ತಾನು ಗಂಡಿಗೆ ಸರಿಸಮಾನಳಾಗಿ ತನ್ನಷ್ಟದಂತೆ ಬದುಕಬೇಕು.
******
ಮಹೇಶ್.ಆರ್
08/03/2017
amaheshr@gmail.com
Comments
Post a Comment