ಆತ್ಮ ಶುದ್ಧಿ

ಒಡೆದಿರುವೆ ಅಮೂಲ್ಯವಾದ ಕನ್ನಡಿಯ ಕೈಯ್ಯಾರೆ

ಅಂಟಿಸಲೇಬೇಕಿದೆ ಈ ಮಾಯಾ ದರ್ಪಣ 

ಇರದಿದ್ದರೆ ನನ್ನೀ ಆತ್ಮಕ್ಕೆ ಬಿಡಬೇಕಿದೆ ತರ್ಪಣ

ಗಾಜಿನ ತುಂಡುಗಳನ್ನು ಹೆಕ್ಕುವಾಗ ರಕ್ತ ಸೋರುತಿಹುದು

ಬೆರಳುಗಳ ನೋವೇ ಇಷ್ಟಿರುವಾಗ ಅವಳ ಮನಸ್ಸಿನ ಯಾತನೆ ಇನ್ನೆಷ್ಟಿರಬೇಡ

ಸ್ವಚ್ಛ ಮಾಡಬೇಕಿದೆ ರಾಡಿಯಾದ ನೆಲವ 

ಜೋಡಿಸಲೇಬೇಕಿದೆ ಅವಳ ಹೃದಯವ 

ಸಾವೇ ಬಂದರೂ ಬಿಡೆನು ಈ ಪ್ರಯತ್ನವ 

ಶುರುವಿನಿಂದ ಜೀವಿಸಬೇಕು, ಮೊದಲಿನಿಂದ ಪ್ರೇಮಿಸಬೇಕು.

ಮಹಾ ಮಳೆಗೆ ಬಿದ್ದ ಮರದ ಟೊಂಗೆಯಿಂದ ಎಲೆ ಚಿಗುರಿದಂತೆ..!



Comments

Popular Posts