ಚಾತಕ ಪಕ್ಷಿ
ಕಾಯುವುದು ಎಷ್ಟೇ ಕಷ್ಟವೇ ಆದರೂ ಅವಳು ಬರುವಳು ಎಂದು ನಂಬಿಕೆಯಿಂದ ಕಾಯುವುದೇ ಮನಸ್ಸಿಗೆ ಹಿತ. ತಾಸು ಗಟ್ಟಲೆ ಸಲೂಲಿನ ಮುಂದೆ ಕಾದು ಕೂತಿದಕ್ಕೂ ಸಾರ್ಥಕ ಎನ್ನುವಂತೆ ಅವಳ ಅರೆಕ್ಷಣದ ನಗು ನನ್ನೆಲ್ಲಾ ಕಾಯುವಿಕೆಯ ನೋವನ್ನು ದೂರ ಮಾಡುವುದು.
ಈಗಲೂ ಅವಳಿಗಾಗಿ ಕಾಯುತ್ತಿದ್ದೇನೆ. ಮಾಡಿದ ತಪ್ಪನ್ನು ಮುಚ್ಚಿಡಲು ಸಾವಿರಾರು ಸುಳ್ಳುಗಳನ್ನು ಜೋಡಿಸಿ ಮಾಲೆ ಮಾಡಿದ್ದೇನೆ. ಅವಳು ಅದೇ ಹಾರವನ್ನು ಹಾಕಿ ನಿನ್ನ "ಸಂಸ್ಕಾರ" ಆಯಿತೆಂದು ಕಾಣದೆ ಮಾಯವಾಗಿದ್ದಾಳೆ.
ದಸರಾದಿಂದ ದೀಪಾವಳಿಯವರೆಗೂ ಸುದೀರ್ಘ ಹಬ್ಬವನ್ನು ಮಾಡಿದ್ದಾಳೆ ಆದರೂ ಅವಳ ಮನಸ್ಸಿಗೆ ಇನ್ನೂ ಸಮಾಧಾನವಾದಂತಿಲ್ಲ. ಇರಲಿ, ಅವಳಿಗಾಗಿ ಎಷ್ಟೇ ನೋವು ಬಂದರೂ, ನಾನು ಮಾಡಿದ ತಪ್ಪಿಗೆ ಶಿಕ್ಷೆ ಕೊಟ್ಟರು ಅನುಭವಿಸಲು ಸಿದ್ಧ. ಮುದ್ದುಮರಿ ದಯಮಾಡಿ ನನ್ನನ್ನು ಕ್ಷಮಿಸು, ಶಿಕ್ಷಿಸು. ರಕ್ಷಿಸು. ಪ್ರೇಮಿಸು..
ಸಾಕಾಗಿದೆ ಈ ಜಂಜಾಟ, ನನ್ನೆಲ್ಲಾ ತಪ್ಪಿನ ಅರಿವಾಗಿದೆ. ನೀನು ಯಾವಾಗಲೂ ಹೇಳುವಂತೆ, "ನೀನು ನನಗೆ ತಾಯಿ ಪ್ರೀತಿ ಕೊಟ್ಟಿದ್ಯಾ.. ನೀನು ಏನೇ ತಪ್ಪು ಮಾಡಿದ್ದರು ನನ್ನ ಮನಸ್ಸಿನ ಮೂಲೆಯಲ್ಲಿ ನಿನ್ನ ಮೇಲೆ ಪ್ರೀತಿ ಇದ್ದೆ ಇರುತ್ತೆ" ಅಂತ ಇದೊಂದು ಸಾರಿ ನೀನು ತಾಯಯಾಗಿ, ಈ ತಾಯಿ ಮಾಡಿರುವ ತಪ್ಪನ್ನು ಮನ್ನಿಸು, ಮುದ್ದಿಸು.
ನಾನು ನಿನಗೆ ಸಿಕ್ಕಾಗ ಹೇಳಿದಂತೆ, "ನಿನ್ನ ತೊಡೆಯ ಮೇಲೆ ಪ್ರಾಣ ಬಿಡಬೇಕೆಂಬ ಬಯಕೆ.. ದಯಮಾಡಿ ಒಂಚೂರು ಹೃದಯದಲ್ಲಿ ಜಾಗ ಕೊಡು. ಕ್ಷಮಿಸು ಮುದ್ದುಮರಿ.
ಈ ಮೊದಲೇ ಹೇಳಿದಂತೆ,
ಇನ್ನೆಲ್ಲೂ ಗೀಚದ ಸಾಲುಗಳಂತೆ...
ಸ್ವಾತಿ ಮಳೆಗೆ ಕಾಯುವ ಚಿಪ್ಪಂತೆ..
ಕಂದನ ಸ್ಪರ್ಶಕ್ಕೆ ಪರಿತಪಿಸುವ ತಾಯಂತೆ..
ತಪಸ್ಸಿಗೆ ನಿಂತ ಭಗೀರಥನಂತೆ...
ನಿನ್ನ ಒಂದು ಪಿಸುಮಾತಿಗಾಗಿ...
ಕಣ್ಣೋಟಕ್ಕಾಗಿ...
ಕಿರುಬೆರಳಿನ ಸ್ಪರ್ಶಕ್ಕಾಗಿ...
ಅರೆಕ್ಷಣದ ಮೌನಕ್ಕಾಗಿ..
ಹುಸಿ ಮುನಿಸಿನ ಕೋಪಕ್ಕಾಗಿ...
ನೂರು ಸಾವಿರ ವರ್ಷದ ಏಕಾಂತವನ್ನೂ ದೂಡಬಲ್ಲೇ..
ನಿನಗಾಗಿ ಕಾಯುತ್ತಿರುವೆ.. ಕಾಯುವೆ..
ಇಂತಿ ನಿನ್ನ
ಲೌವ್ಲೀ ಚಿನ್ನಿಮರಿ
Comments
Post a Comment