ನೀರವ ಮೌನ
ಅಲೆವ ನೀರಿಗೆ ತೀರವ ಮುಟ್ಟುವ ತವಕ
ದಂಡೆಯ ಮರಳಿಗೆ ನೀರ ಮೇಲೆ ಮರುಕ
ಮತಿಹೀನನಂತೆ ನನ್ನನ್ನು ಹಿಂಬಾಲಿಸಬೇಡ ಎನ್ನಲು ಮಳಲು
ಮರು ಮಾತಾಡದೇ ನೀರು ಮರಳಿ ಮರಳಿಗೆ ಮುತ್ತಿಕ್ಕುತ್ತಿತ್ತು
ದಂಡೆಯ ಉಸುಕಿಗೆ ದಂಡಿ ದಂಡಿಯಾಗಿ ಸಿಟ್ಟೇರುತ್ತಿತ್ತು
ಮತ್ಸ ಅವತಾರವೇ ಹುದುಗಿಸಿಕೊಂಡಿರುವ ನೀರಿಗೆಂತ ಕೋಪ?
ಮತ್ತೆ ಮತ್ತೆ ದಂಡೆತ್ತಿ ಬರುತಿರಲು
ಮೌನ ದಾಳಿಗೆ ಮರುಳಾಗಿ ನೀರಲ್ಲಿ ಮರಳು ಮಾಯವಾಗುತ್ತಿತ್ತು
ಮರಳಿನ ಮಾತಿಗೆ ಒಂದೇ ಅರ್ಥವಿದ್ದರೆ
ನೀರಿನ ಮೌನಕ್ಕೆ ಸಾವಿರ ಅರ್ಥವುಂಟು
Comments
Post a Comment