ನೀಲಿ ನೈಟಿ
ಫ್ಲೋರಲ್ ಫ್ರಾಕ್ ಹಾಕಿ
ಬ್ರಿಟನ್ ರಾಣಿಯಂತೆ
ತಲೆ ಮೇಲೆ ಟೋಪಿ ಧರಿಸಿ
ಭೋರ್ಗರೆವ ಬೀಚಿನಲ್ಲಿ ಪುಟ್ಟ
ಬಾಲಕಿಯಂತೆ ನಿಂತವಳು
ಏರ್ಪೋರ್ಟೆಂಬ ಮಾಡ್ರನ್ ಸಂತೆಲೀ
ಅತ್ತಿತ್ತ ನೊಣಗಳಂತೆ ಹಾರಾಡುವ
ಸಾವಿರಾರು ಮಂದಿಯ ನಡುವೆ
ದೊಗಳೆ ಖಾದಿ ಪ್ಯಾಂಟು ಕಾಡಿಗೆ ಟೀಶರ್ಟ್
ತೊಟ್ಟು ಪತಂಗದಂತೆ ಬಂದವಳು
ಹೆದ್ದಾರಿ ಮಧ್ಯೆ ಸತ್ತು ಬಿದ್ದ
ಮೈಲಿಗಲ್ಲಿನಂತ ಜನಗಳ ನಡುವೆ
ಹೊಳೆಯುವ ಮಿನುಗು ದೀಪದಂತೆ
ಕೆಂಪು ಸೀರೆಯನ್ನುಟ್ಟು ಮಿಂಚುವಳು
ಖಾಸಾ ಕೋಣೆಗಳ ನಡುವೆ
ಅವಳ ಅಮ್ಮನ ನೆನಪಿನಲ್ಲಿ
ಪಿನ್ನು ಹಾಕಿದ ನೀಲಿ ನೈಟಿ ಉಡುವಳು
ನನ್ನಿಷ್ಟದ ಹುಡುಗಿ.. ಅವಳೇ ನನ್ನವಳು
Comments
Post a Comment