ಹರಾಮಿ

ನಿನ್ನಂತರಾಳದಲ್ಲಿ ಬಚ್ಚಿಡುವೆಯಾ ನನ್ನನ್ನು 

ಪ್ರೀತಿಯ ಚಾದರದ ಮೇಲೆ ಹೊರಳುತ್ತಾ 

ನಿನ್ನನ್ನೇ ಮುದ್ದಿಸುವ ಕನಸು ಕಾಣುವ ಕಿಡಿಗೇಡಿ ನಾನು

ನನ್ನಂತರಾಳದಲ್ಲಿ ಬೆಚ್ಚಗಿಡುವೆ ನಿನ್ನನ್ನು 

ಒಲವಿನ ಶಾಖವ ನೀಡುತ್ತಾ 

ನಿನ್ನನ್ನೇ ಕದಿಯುವ ಹುನ್ನಾರವ ಮಾಡುವ ಉಪದ್ರವಿ ನಾನು

ದೋಚುವುದರಲ್ಲಿ ಮಂದಗತಿಯ ಆಮೆ ನಾನು 

ತುಸು ಇನ್ನಷ್ಟು ಸಹಕರಿಸು ಅಪಹರಿಸಲು ನೀನು

ಯಾರು ಕಾಣದ ಎಲ್ಲೂ ಕೇಳದ ಊರಿಗೋಗಿ ಠಿಕಾಣಿ ಹೂಡುವ

ಹುಣ್ಣಿಮೆಯ ಚಂದಿರನ ಹೊಳಪನ್ನು ನಿನ್ನ ಕಣ್ಣಲ್ಲಿ ನೋಡುತ್ತಾ

ರೇಶಿಮೆಯ ನೂಲಿನಂತ ನಿನ್ನ ಮುಂಗುರಳನ್ನು ನೇವರಿಸುತ್ತಾ

ನಿನ್ನ ಹೆಗಲಿಗೆ ಹೆಗಲಾಗಿ ಮತ್ತೆ ಮತ್ತೆ ಕೆನ್ನೆ ತಾಗುವ ಉಸಿರನ್ನು ಆಹ್ಲಾದಿಸುತ್ತಾ

ನಿನ್ನ ಅಂಗೈಯಲ್ಲಿ ನನ್ನ ಬೆರಳಿಟ್ಟು ನಮ್ಮಿಬ್ಬರ ಹೆಸರ ಬರೆಯುತ್ತಾ

ಗಾಢ ನಿದ್ರೆಯನ್ನು ಛೇಡಿಸುವಂತ ನಿನ್ನ ಮೂಗುತಿಗೆ ಆಗಾಗ ಮುತ್ತನ್ನಿಕ್ಕುತ್ತಾ

ಸಾರಾಸಗಟಾಗಿ ಕಳೆಯುವೆ ಇನ್ನೆಲ್ಲಾ ಜನ್ಮವನ್ನೂ ನಿನ್ನ ಸನಿಹವಾ ಬಯಸುತ್ತಾ

ಹರಾಮಿ, ನಮ್ಮನ್ನು ಹುಡುಕಿ ಮನೆಯವರು ಬಂದರೆ ಎಂದು ಮುಗ್ಧವಾಗಿ ಕೇಳಿದಳು

ಬರಲಿ ಬಿಡು, ಸಿಕ್ಕಿ ಬಿದ್ದರೂ ಬಿಡಲಿ ಬಿಡು.. ನಿನ್ನೊಂದಿಗೆ ಇಹದಲ್ಲಿ ಅಲ್ಲದಿದ್ದರೂ ಪರದಲ್ಲಿ ಜೊತೆಯಾಗುವೆ 

Comments

Popular Posts