ಅವ್ನ್ ಬಿಟ್ಟ್ ಇವ್ನ್ ಬಿಟ್ಟ್, ಇವ್ಳು ಯಾರು ?
ಧಡ ಧಡ ಅಂತ ಯಾರೋ ಒಳಗೆ ಬಂದ ಸದ್ದಾಯ್ತು.
ಕಾನ್ಸ್ಟೇಬಲ್ ಕೃಷ್ಣಪ್ಪ ತುಕಡಿಸುತ್ತಲೇ, ಅರೆಗಣ್ಣು ಬಿಟ್ಟು "ಇಷ್ಟೊತ್ತಲ್ಲಿ ಯಾವೋನ್ನೂ ಸ್ಟೇಷನ್ಗೆ ನುಗ್ಗೀರೋ ಕಳ್ಳ" ಎಂದು ಅರಚಿದ.
ಆದರೆ ಹೆಜ್ಜೆ ಸದ್ದು ಹತ್ತಿರ ಆದಂತೆ ಹೆಣ್ಣು ಅಳುವ ಧ್ವನಿ ಕೇಳಿಸಿತು.
ಆ ಹೆಣ್ಣು ಗೋಳಾಡುತ್ತಲೇ ಸೀದಾ ಒಳಕ್ಕೆ ಬಂದಳು, ಅವಳು ಅಳುವ ಸದ್ದಿಗೆ ಸ್ಟೇಷನ್ನಿನಲ್ಲಿ ಮಲಗಿದ್ದ ಕಾನ್ಸ್ಟೇಬಲ್ಗಳು ಇದ್ದಲ್ಲಿಯೇ ಕಣ್ಣು ಬಿಟ್ಟರು.
ಬಟ್ಟೆ ಅಲ್ಲಿ ಅಲ್ಲಿ ಹರಿದಿತ್ತು, ಕೂದಲು ಕೆದರಿತ್ತು, ತುಟಿಯಿಂದ ರಕ್ತ ಸೋರುತ್ತಿತ್ತು.
ಪೋಲಿಸ್ರಿಗೆ ಊಹಿಸಲು ಕಷ್ಟವೇ ಆಗಲ್ಲಿಲ್ಲ.
ಆದರೂ ಏನು ವಿಚಾರ ಅಂತ ಕೇಳೋಣ ಎಂದು ಮೊದಲಿಗೆ ಅವಳನ್ನು ಕೂರಿಸಿ ಒಂದು ಲೋಟ ನೀರನ್ನು ಕೊಟ್ಟರು.
ಧಾವಂತದಿಂದ ನೀರನ್ನು ಒಂದೇ ಗುಟುಕಿಗೆ ಕುಡಿಯುತ್ತಾ ಬಟ್ಟೆ ಮೇಲೆಲ್ಲಾ ಚೆಲ್ಲಿಕೊಂಡಳು.
ಕಾನ್ಸ್ಟೇಬಲ್ ಕೃಷ್ಣಪ್ಪ ಅವಳ ಪಕ್ಕಕ್ಕೇ ಕುರ್ಚಿಯನ್ನು ಎಳೆದುಕೊಂಡು ಕುಳಿತು.
"ಏನಾಯ್ತಮ್ಮ".ಎಂದು ಕೇಳಿದ.
ಮಾತನಾಡಲು ಬಾಯಿ ತೆಗೆದಳು, ದುಃಖ ಒಳಗಿನಿಂದ ಉಮ್ಮಳಿಸಿ ಬಂದು ಮತ್ತೇ ಅಳಲು ಶುರು ಮಾಡಿದಳು.
ಕಾನ್ಸ್ಟೇಬಲ್ ಕೃಷ್ಣಪ್ಪನಿಗೆ ನಾಲ್ಕು ಜನ ಹೆಣ್ಣು ಮಕ್ಕಳು, ಎಷ್ಟೇ ಆದ್ರೂ ಹೆಣ್ಗರಲು ತರ, ಅವಳನ್ನು ಸಂತೈಸುತ್ತಲೇ ಕೇಳಿದ.
"ಅದೇನಾಯ್ತು ಸರಿಯಾಗಿ ಹೇಳಮ್ಮಾ"
"ನನ್ನ ಹೆಸ್ರು ಶೀಲ ಅಂತ, ಯಶವಂತಪುರದಲ್ಲಿ ಇರೋ ಕಾಲ್ ಸೆಂಟರಲ್ಲಿ ಕೆಲ್ಸ ಮಾಡೋದು, ನಮ್ಮ ಮನೆ ಇರೋದು ಚಂದಾಪುರದ ಹತ್ರ, ಇವತ್ತು 12ಗಂಟೇ ಶಿಫ್ಟ್ ಮುಗಿಸಿಕೊಂಡು, ಕ್ಯಾಬಲ್ಲೀ ಬರ್ಬೇಕಾದ್ರೆ, ಕ್ಯಾಬ್ ಸಿಲ್ಕ್ ಬೋರ್ಡ್ ಹತ್ರ ಕೆಟ್ಟೋಯ್ತು, ಕ್ಯಾಬ್ ಡ್ರೈವರ್ ಬೇರೆ ಕ್ಯಾಬಿಗೇ ಪೋನ್ ಮಾಡಿ ಯಶವಂತಪುರದಿಂದ ತರೋಕೆ ಹೇಳಿದ್ರು, ಅದು ಬರೋವರ್ಗೂ ಲೇಟ್ ಆಗುತ್ತೆ ಮತ್ತೆ ನಂಗೆ ತುಂಬಾ ತಲೆ ನೋವು ಬೇರೆಯಿತ್ತು ಅದಕ್ಕೇ ನಾನು ಆಟೋನೋ ಇಲ್ಲ, ಟೇಂಪೋನೋ ಹತ್ತಿಕೊಂಡು ಹೋಗ್ತೀನಿ ಅಂತ ನಡೆಕೊಂಡು ಬರ್ಬೇಕಾದ್ರೆ ಒಂದು ಟಿಟಿ ಬಂತು, ಎಲ್ಲಿಗೇ ಹೋಗ್ಬೇಕು ಅಂದ್ರು.
ಒಳಗೆ ಯಾರು ಇರ್ಲಿಲ್ಲ ಸ್ವಲ್ಪ ಭಯ ಆಯ್ತು ಆದ್ರೂ ಬೇರೆ ಗಾಡಿ ಸಿಗೋಕೆ ಲೇಟ್ ಆಗುತ್ತೆ ಅಂತ ಅದಕ್ಕೆ ಹತ್ತಿ ಕೂತು ಎರಡು ನಿಮಿಷ ಆಗಿಲ್ಲ, ಗಾಡಿ ತುಂಬಾ ಸ್ಪೀಡಾಗಿ ಓಡಿಸೋಕೆ ಶುರು ಮಾಡಿದ್ರು, ಆಮೇಲೆ ನಮ್ಮ ಏರಿಯಾಗೆ ಶಾರ್ಟ್ ಕಟ್ ಇದೆ ಎಂದು, ಯಾವ್ದೋ ತುಂಬಾ ಕತ್ತಲು ಇರೋ ಜಾಗಕ್ಕೇ ಕರ್ಕೋಂಡು ಹೋಗಿ" ಗೋಳೋ ಎಂದು ಅಳಲು ಶುರು ಮಾಡಿದಳು, ಮತ್ತೇ ಒಳಗೆ ಉಸಿರು ಎಳೆದುಕೊಳ್ಳುತ್ತ "ನನ್ನನ್ನು ಹಾಳು ಮಾಡ್ಬಿಟ್ರು, ನಾನು ಕಿರುಚಾಡಿದಕ್ಕೆ ಕಪಾಳಕ್ಕೆ ಹೊಡೆದರು, ಕಣ್ಣು ಬಿಟ್ಟಾಗ ಕಸದ ತೊಟ್ಟಿ ಹತ್ರ ಬಿಸಾಕಿದ್ದರು" ಎಂದು ಕಣ್ಣೀರು ಇಟ್ಟಳು.
ಬೆಳಗಾಗುವದರೊಳಗೆ ಇದು ಮಾಧ್ಯಮಗಳಲ್ಲೀ ಭಾರೀ ಸುದ್ದಿಯಾಯಿತು.
ಪೋಲೀಸರು ಸಂಜೆಯೊಳಗೆ ಇಬ್ಬರು ಆರೋಪಿಗಳನ್ನು ಸೆರೆಹಿಡಿದರು.
ಮ್ಯಾಜಿಸ್ಟ್ರೇಟರ್ ಮುಂದೇ ಹಾಜರುಪಡಿಸಿದಾಗ ವ್ಯತಿರಿಕ್ತವಾದ ಹೇಳಿಕೆಯೊಂದನ್ನು ಕೊಟ್ಟರು.
"ರಾತ್ರಿ ಸುಮಾರು 12.40 ಆಗಿತ್ತು,ನಾನು ಮತ್ತೆ ಕ್ಲೀನರ್ ಕುಮಾರ ಎಂದಿನಂತೆ ನಮ್ಮ ಟ್ರಿಪ್ ಮುಗಿಸ್ಕೋಂಡು ಚಂದಾಪುರದ ಕಡೇ ಬರುವಾಗ ಒಂದು ಹುಡ್ಗಿ ಗಾಡಿ ನಿಲ್ಲಿಸುವಂತೆ ಕೈ ತೊರಿಸಿದ್ಲು.
ನಾವು ಆಗಲೇ ಸ್ವಲ್ಪ ಕುಡಿದ್ದೀದ್ದೋ, ಗಾಡಿ ನಿಲ್ಲಿಸಿ.
'ಎಲ್ಲಿಗೆ ಅಂತ ಕೇಳಿದೆ'
"ಎಲ್ಲಿಗಾದ್ರೂ ಸರಿ" ಎಂದು ಕಣ್ಣು ಹೊಡೆದಳು.
ನಮ್ಗೆ ಇದು ಮಾಲು ಅಂತ ಗೊತ್ತಾಗಿ,
"ಎಷ್ಟು ಅಂದೇ"
"ಸಾವಿರ ರೂಪಾಯಿ" ಅಂದ್ಲು
"ನೈಟಿಗಾ ?"
"ಇಲ್ಲ ಮೂರು ದಿನಕ್ಕೆ" ಅಂತ ರೇಗಿದ್ಲು
"ಸರಿ ಸ್ವಲ್ಪ ಕಮ್ಮಿ ಮಾಡ್ಕೋ"
"ಕಮ್ಮೀ ಆಗಲ್ಲ, ಇಬ್ರು ಇದೀರಾ" ಅಂದ್ಲು
"ಆಯ್ತು, ಹತ್ತು" ಎಂದು ಟಿಟಿ ಹತ್ತಿಸಿಕೊಂಡೋ, ಆದ್ರೆ ಹತ್ತೀದ್ಮೇಲೇ ಒಂದು ಕಂಡೀಷನ್ ಹಾಕಿದ್ಲು.
"ಹಣ್ಣು ಕೈಗೆ ಸಿಕ್ಕರೆ ಮಜಾ ಇರೊಲ್ಲ, ಬಡಿದಾಡಿಕೊಂಡು, ಕಚ್ಚಾಡಿಕೊಂಡು ತಿಂದ್ರೇನೇ ಮಜಾ"ಎಂದು ಹೊಸ ವರಸೆ ತೆಗೆದ್ಲು.
"ಹೂ, ಇದು ಚೆನ್ನಾಗಿರ್ತದೆ" ಅಂತ ಅಂದೆವು.
ಆಮೇಲೇ ಎಲ್ಲಾ ಮುಗಿದ್ಮೇಲೆ ದುಡ್ಡು ಬ್ಯಾಡ ಅಂತ ಡ್ರಾಪ್ ಮಾತ್ರ ಮಾಡಿಸ್ಕೋಂಡು, ಈವಾಗ ಕಂಪ್ಲೇಂಟ್ ಕೊಟ್ಟೀದಾಳೆ" ಎಂದರು. ಆರೋಪಿಗಳ ಮೇಲೆ ಹಿಂದೆ ಕೆಲ್ವು ವಂಚನೆಯ ಹಾಗು ಇನ್ನಿತರ ಪ್ರಕರಣಗಳು ಇದ್ದರಿಂದ ಇವರನ್ನೂ ಹೆಚ್ಚಿನ ವಿಚಾರಣೆಗೆ 14ದಿನಗಳು ಪೊಲೀಸ್ ಕಸ್ಟಡಿಗೆ ಕೊಡಲಾಯ್ತು.
ಆದರೆ ಆಸ್ಪತ್ರೆಯಲ್ಲೀ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯು ಕೂಡ, "ಸುನೀಲ ಅನ್ನೋನು ಮಾತ್ರ ನನ್ನ ಮೇಲೆ ಅತ್ಯಾಚಾರ ಮಾಡಿದ, ಅವ್ನ ಸ್ನೇಹಿತ ನಂಗೆ ದೈಹಿಕವಾಗಿ ಹಿಂಸೆ ಕೊಟ್ಟಿಲ್ಲ, ಆದ್ರೆ ಅವ್ನು ಟಿಟಿಯನ್ನು ಓಡಿಸುತ್ತಾ ಅವ್ನಿಗೆ ಸಹಕರಿಸಿದ, ಇವ್ರು ತಪ್ಪಿಸಿಕೊಳ್ಳಲು ಇವಾಗ ಈ ತರ ನಾಟ್ಕ ಆಡ್ತಿದಾರೆ, ದಯವಿಟ್ಟು ನಂಗೆ ನ್ಯಾಯ ಕೊಡಿಸಬೇಕು" ಎಂದು ಗೋಗರೆದಳು.
ಪೋಲೀಸರೀಗೇ ಸಮಸ್ಯೇ ಜಟಿಲವಾಗ ತೊಡಗಿತು.
ಮಾಧ್ಯಮಗಳ ಒತ್ತಡ ಜಾಸ್ತಿಯಾಯ್ತು.
ಈ ಕೇಸನ್ನು ಡಿವೈಸ್ಪಿ ರಾಜೇಶ್ ವರ್ಮರಿಗೆ ವಹಿಸಲಾಯಿತು.
ಆರೋಪಿಗಳಿಗೆ ಎಷ್ಟೇ ಬೆಂಡೆತ್ತಿದರು, ಅದೇ ಉತ್ತರವನ್ನು ಕೊಡುತ್ತಿದ್ದಿರು.
ಮಾರನೇ ದಿನ ವರ್ಮರವರು ಹೆಚ್ಚಿನ ಮಾಹಿತಿಗಾಗಿ ಯುವತಿಯ ಮನೆಗೆ ಹೋದರು.
ಮನೆಯಲ್ಲಿ ಅವಳ ಸಹಾಯಕ್ಕಾಗಿ ದೂರದ ಸಂಬಂಧಿ ಅಜ್ಜಿ ಒಬ್ಬಳು ಜೊತೆಗೆ ಇದ್ದಳು.
ವರ್ಮರವರು ಒಳಗೆ ಬರುತ್ತಿದ್ದಂತೆ ಯುವತಿ ಎದ್ದು ಕುಳಿತು ಕೊಳ್ಳಲು ಪ್ರಯತ್ನಿಸಿದಳು.
"ಪರ್ವಾಗಿಲ್ಲ ಮಲ್ಕೋಳಿ, ಸ್ವಲ್ಪ ಇನ್ಫರ್ಮೇಶನ್ ಬೇಕಿತ್ತು ಅದಕ್ಕೆ ಬಂದೆ ಸ್ಸಾರಿ ಟು ಡಿಸ್ಟರ್ಬ್ ಯೂ" ಎಂದು ಕನ್ನಡಕವನ್ನು ತೆಗದರು.
"ತೊಂದ್ರೇ ಏನು ಇಲ್ಲ ಸಾರ್"
"ಹ್ಮ, ಅವತ್ತೇ ಮೊದಲ ನೀವು ಅವ್ರನ್ನ ನೋಡಿದ್ದು ?" ಎಂದು ಕೇಳಿದರು.
ಇಲ್ಲಾ ಸಾರ್, ಸುಮಾರು ಒಂದು ವರ್ಷದ ಹಿಂದೇ ನಮ್ಮ ತಾಯಿ ಸುನೀಲನ ಹತ್ರ ನನ್ನ ಮದುವೆಗೆ ಅಂತ ಮೂರು ಲಕ್ಷದ ಚೀಟಿ ಹಾಕಿದ್ದರು, ಆವಾಗ ಒಂದು ಸಲ ನೋಡಿದ್ದೆ, ನಂಗೆ ಒಳ್ಳೆ ಕಡೇ ಸಂಬಂಧ ಬಂತು, ಅಪ್ಪ ಇಲ್ಲದ ಕಾರಣ ಮತ್ತು ತಮ್ಮ ಚಿಕ್ಕವನು ಆಗಿದ್ದರಿಂದ ಅಮ್ಮನೇ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡರು, ಇವ್ನ ಹತ್ರ ಹಾಕಿದ್ದ ಚೀಟಿ ದುಡ್ಡನ್ನು ಕೇಳಿದಾಗ ಜಗಳ ಮಾಡಿ ಕಳುಹಿಸಿದ, ಆದಾದ ಎರಡು ದಿನ ಆದ್ಮೇಲೆ ಮೇಲೆ ಮತ್ತೇ ಹಣ ಕೇಳಲು ನನ್ನ ತಮ್ಮನ ಜೊತೆ ಹೋಗಿದ್ದಾಗ, ರಾತ್ರಿ 9.30ಕ್ಕೇ ಬರುವಂತೆ ಹೇಳಿ, ಅವ್ರು ಬರುವ ದಾರಿಯನ್ನೇ ಕಾದು, ಅವ್ರು ನಡೆದುಕೊಂಡು ಬರುವಾಗ ಆಕ್ಸಿಡೇಂಟ್ ಮಾಡಿ ಸಾಯಿಸ್ಬಿಟ್ಟ್ರು. ನಾನು ಅವತ್ತೇ ಅನಾಥಳಾದೆ, ಪೋಲಿಸ್ರಿಗೆ ಕಂಪ್ಲೇಂಟ್ ಕೊಟ್ರೆ ಯಾರು ಗುದ್ದೀದಾರೇ ಗಾಡಿ ನಂಬರ್ ಇಲ್ಲದೆ ಏನು ಮಾಡೋಕೆ ಆಗಲ್ಲ ಎಂದು ಕೇಸನ್ನು ಮುಚ್ಚಿಹಾಕಿದ್ರು, ಆದ್ರೆ ನಂಗೆ ಅವತ್ತು ಕ್ಯಾಬ್ ಹತ್ತೋವರ್ಗೂ ಇವ್ರೇ ಅಂಥ ಕತ್ತಲಲ್ಲ ಗೊತ್ತಾಗಲಿಲ್ಲ, ಅವ್ರಿಗೂ ನನ್ನ ನೆನಪಿಲ್ಲ, ಆದ್ರೆ ಇವ್ರು" ಅಂತ ಮತ್ತೇ ಕಣ್ಣೀರು ಇಡುತ್ತಾ "ದಯವಿಟ್ಟು ನಂಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಂಡಳು.
"ಸರಿ. ನೀವು ರೆಸ್ಟ್ ತಗೋಳಿ, ಏನಾದ್ರೂ ಇದ್ರೆ ಹೇಳಿ ಕಳಿಸ್ತೀನಿ ಸ್ಟೇಷನಿಗೆ ಬನ್ನಿ" ಎಂದು ಎದ್ದು ಹೊರನಡೆದರು.
ವರ್ಮರ ತಲೇಯಲ್ಲೀ ಈಗ ಸಣ್ಣದೊಂದು ಅನುಮಾನದ ಹುತ್ತ ಮನೆ ಮಾಡಿತ್ತು.
ಇತ್ತ ಆರೋಪಿಗಳಿಗೆ ಸರಿಯಾಗಿ ಏರೋಪ್ಲೇನ್ ಹತ್ತಿಸಿ ಕೇಳಿದ್ರೆ,
"ಸಾರ್ ಅವಮ್ಮಂಗೆ ದುಡ್ಡು ಕೊಡಬೇಕಾಗಿತ್ತು ಅಷ್ಟರಲ್ಲೀ ಅವ್ರು ಆಕ್ಸಿಡೇಂಟ್ ಆಗೀ ಸತ್ತೋದ್ರೂ"
"ಸತ್ತೋದ್ರಾ,ಸಾಯೀಸೀದ್ರಾ ? ಬಾಯಿ ಬಿಡ್ರೋ ಸೂಳೆಮಕ್ಳಾ" ಎಂದು ಲಾಟಿ ರುಚಿ ತೋರಿಸಿದಾಗ.
"ಸಾರ್ ಹೊಡಿಬೇಡಿ, ಹೇಳ್ತೀನಿ ಹೇಳ್ತಿನಿ, ನಾವೇ ಆಕ್ಸಿಡೇಂಟ್ ಮಾಡದಿದ್ದು, ಆದ್ರೆ ಈ ಹುಡ್ಗೀನ ನಾವು ಮೊನ್ನೆನೇ ನೋಡಿದ್ದು, ಅವ್ಳೇ ಕೈ ತೋರ್ಸಿ ಕರೆದಿದ್ದು" ಎಂದು ಕೈ ಕೈ ಮುಗಿದರು.
"ರೇಪ್ ಮಾಡ್ಬಿಟ್ಟು, ಸುಳ್ಳು ಹೇಳ್ತೀರಾ ಬೋಳಿ ಮಕ್ಳಾ" ಎಂದು ಹಿಗ್ಗಾಮುಗ್ಗ ಹೊಡೆದರು.
"ಸಾರ್ ದೇವ್ರ್ಣಾಣೇಗೂ ನಮ್ಗೆ ಇಷ್ಟೇ ಆಗಿದ್ದು" ಎಂದರು.
ಕಾನ್ಸ್ಟೇಬಲ್ ಕೃಷ್ಣಪ್ಪ ಸೆಲ್ ಒಳಗೇ ಬಂದು "ಸರ್, ಆವತ್ತು ಆ ಹುಡ್ಗಿಗೆ ಡ್ರಾಪ್ ಮಾಡಿದ್ದ ಆಫೀಸ್ ಕ್ಯಾಬ್ ಡ್ರೈವರ್ ಬಂದಿದ್ದಾನೆ" ಎಂದ.
"ಸರಿ ಬಂದೆ" ಎಂದು ಇನ್ನೊನ್ದು ನಾಲ್ಕು ಏಟು ಹೊಡೆದು, "ನನ್ನ ಮಕ್ಳಾ ನರ ಕಟ್ ಮಾಡ್ಬೇಕು" ಎಂದು ಹೊರಗೆ ಬಂದು.
"ನೀನೇ ಏನೋ ಅವತ್ತು ಡ್ರಾಪ್ ಮಾಡಿದ್ದು, ಮನೇವರ್ಗೂ ಬಿಡೋಕೇನು" ಅಂತ ಕಪಾಳಕ್ಕೆ ಹೊಡೆದರು.
"ಸಾರ್ ಹೊಡೀಬೇಡಿ ನಂದೇನು ತಪ್ಪಿಲ್ಲಾ, ಅವತ್ತು ಸುಮಾರು ರಾತ್ರಿ 12.30 ಆಗಿತ್ತು, ಲಾಸ್ಟ್ ಡ್ರಾಪ್ ಇವ್ರು ಒಬ್ಬರೇ ಇದ್ದಿದ್ದು, ಸಿಲ್ಕ್ ಬೋರ್ಡ್ ಆಗ್ತಿದ್ದಂಗೆ ನಂಗೆ ಇಲ್ಲೇ ನಿಲ್ಲಿಸಿ ನಮ್ಮ ಕಡೇಯವರು ಬರ್ತಾರೆ, ನಾಳೆ ಅವ್ರ ಮನೇಲಿ ಫಂಕ್ಷನ್ ಇದೆ, ನಾನ್ ಅವ್ರ ಜೊತೆ ಹೋಗ್ತೀನಿ ಅಂತ ಇಳಿದರು, ಎಷ್ಟು ಹೇಳಿದ್ರು ಕೇಳಲೇ ಇಲ್ಲ ಸಾರ್" ಎಂದು ಒಂದೇ ಉಸಿರಿನಲ್ಲಿ ಹೇಳಿದ.
ವರ್ಮರ ಅನುಮಾನ ಮತ್ತಷ್ಟೂ ಹೆಚ್ಚಾಯಿತು.
ಅದೇ ಸಮಯಕ್ಕೇ ಎಸ್.ಐ.ತಿಮ್ಮಯ್ಯ ಒಳಗೇ ಓಡೋಡುತ್ತಾ ಬಂದು.
"ಸರ್, ಫೋರೇನ್ಸೀಕ್ ಲ್ಯಾಬ್ ರಿಪೋರ್ಟ್ ಬಂದಿದ್ದೆ" ಎಂದು ವರ್ಮರ ಕೈಗೆ ಫೈಲ್ನಿಟ್ಟನು.
"ಹ್ಮ" ಎಂದು ಫೈಲ್ ತೆಗದುಕೊಂಡು ಪರಿಶೀಲಿಸಿದಾಗ ವರ್ಮರಿಗೆ ಏನೋ ತಪ್ಪಾಗಿದೆ ಎಂದು ಅನಿಸಿ.
"ರೀ ಕೃಷ್ಣಪ್ಪ ಆ ಹುಡ್ಗಿ ಸ್ಟೇಟ್ಮೇಂಟ್ಸ ಫೈಲ್ ಕೊಡ್ರಿ" ಎಂದು ಏನನ್ನೋ ಆಲೋಚಿಸುತ್ತಿದ್ದರು.
"ಹಾ, ಕೊಟ್ಟೆ ಸಾರ್" ಕೃಷ್ಣಪ್ಪ ಫೈಲನ್ನು ತಡಕಾಡಿ ತಂದುಕೊಟ್ಟನು.
ಎರಡುನ್ನು ಒಟ್ಟಿಗೇ ಪರಿಶೀಲಿಸಿದಾಗ ವರ್ಮರಿಗೆ ಕರೇಂಟ್ ಶಾಕ್ ಹೊಡೆದಂತೆ ಅನುಭವವಾಯ್ತು.
"ಸುನೀಲ್ ಎಂಬಾತ ಮಾತ್ರ ಅತ್ಯಾಚಾರ ಮಾಡಿದ್ದು, ಆತನ ಸ್ನೇಹಿತ ಅತ್ಯಾಚಾರ ಮಾಡಲಿಲ್ಲ, ಆದ್ರೆ ಟಿಟಿ ಓಡಿಸುತ್ತಾ ಅವ್ನಿಗೆ ಸಹಕರಿಸಿದ" ಎಂದು ಹೇಳಿಕೆ ಕೊಟ್ಟೀದ್ದಳು, ಆದರೆ ಫೋರೇನ್ಸೀಕ್ ಲ್ಯಾಬ್ ರಿಪೋರ್ಟ್ನಲ್ಲಿ, "ಆಕೆಯ ಬಟ್ಟೇಯಲ್ಲಿ ಇಬ್ಬರು ಬೇರೆ, ಬೇರೆ ಗಂಡಸರ ವೀರ್ಯಗಳು ಸಿಕ್ಕಿವೆ" ಎಂದು ರಿಪೋರ್ಟ್ ಬಂದಿತ್ತು.
ವರ್ಮ ಅನುಮಾನ ನಿಜವಾಯಿತು.
ಈಗಲೇ ಹೋಗಿ ಶೀಲಳನ್ನು ಬಂದಿಸಬೇಕು ಎಂದು ಜೀಪಿನಲ್ಲಿ ಅವಳ ಮನೆ ತಲುಪಿದಾಗ,
ಮನೆ ಮುಂದೇ ಸುಮಾರು ಜನ ಸೇರಿದ್ದರು,
ಯಾರೋ ಗೋಳಾಡುವ ಶಬ್ಧ ಕೇಳಿತು, ಹತ್ತಿ ಹೋಗಿ ನೋಡಿದರೆ ಶೀಲ ಈ ಲೋಕವನ್ನೇ ತ್ಯಜಿಸಿದ್ದಳು. ಅಜ್ಜೀ ಅವಳ ಹೆಣದ ಮೇಲೆ ಮುಖವಿಟ್ಟು "ನಿನ್ ಹೋಗೋ ಬದ್ಲು, ಸಿವ ನನ್ನಾದ್ರೂ ಕರ್ಕಬಾರ್ದ"ಎಂದು ಕಣ್ಣೀರು ಇಡುತ್ತಿದ್ದಳು.
ವರ್ಮರಿಗೆ "ಹೆಣ್ಣು ತನ್ನ ಸೇಡನ್ನು ತೀರಿಸಿಕೊಳ್ಳಲು, ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲಳು" ಅಂತ ತಿಳಿದು ಅಲ್ಲೇ ಪೆಚ್ಚಾಗಿ ನಿಂತರು.
*********
26-05-2016
©ಮಹೇಶ್ ಪುಲಿಕೇಶಿ
Comments
Post a Comment