ಕವನ ಅನ್ಕೋಳಿ
ಮುಂಜಾವದ ನಸುಕಿನಂತೆಯೇ ನನ್ನವಳು
ಅರೆಕ್ಷಣ ನಗುವಳು ದಿನವೆಲ್ಲಾ ಅಳುವಳು
ನಿರಾಡಂಬರ ಮನಸ್ಸಿನ ಚೆಲುವೆ ನನ್ನವಳು
ಎಲ್ಲೂ ಹೋಗದ ಹಾಗೇ ಕೈಯ ಹಿಡಿದಿರುವಳು
ಇಂಥಾ..! ಸ್ನಿಗ್ಧ ಸುಂದರಿಯನ್ನು ಬಿಟ್ಟು ಯಾವ ನರಕಕ್ಕೆ ಹೋಗಲಿ ಶ್ರೀರಾಮಚಂದಿರ...!
ಹಗಲಿರುಳ ಅರಿವೇ ಆಗದಂತೆ ಪ್ರೀತಿಸುವಳು
ಕೋಪ,ಮೌನ,ಹುಸಿಮುನಿಸಿನಿಂದಲೇ ಕಾಡುವಳು
ಪ್ರೀತಿಯಲ್ಲಿ ಪ್ರತಿಬಾರಿಯೂ ನನ್ನನೇ ಸೋಲಿಸುವಳು
ಮತ್ತೇ ಮತ್ತೇ ಸೋಲಬೇಕೇಂದನಿಸುವಂತೆ ನೋಡುವಳು
ಇಂಥಾ...! ಅರಸಿಯನ್ನು ಅಗಲಿ ಯಾವ ಅಪ್ಸರೇ ಹಿಂದೆ ಹೋದರೂ ನರಕವೇ ಶ್ರೀಕೃಷ್ಣ ಪರಮಾತ್ಮ.
ಮಹೇಶ್ ಪುಲಿಕೇಶಿ
04/02/2017
Comments
Post a Comment