ಪ್ರೀತಿಸುವುದು ಅಷ್ಟು ಕಷ್ಟವೋ...!

ಹೀಗೆ ನಮಗೆ ಅನಿಸುವುದು ಒಬ್ಬರನ್ನು ಅರ್ಥ ಮಾಡಿಕೊಂಡು ಪ್ರೀತಿಸಬೇಕು ಎಂದು ಹೊರಟಾಗ.

ನಿಜವಾಗಿಯೂ ಪ್ರೀತಿಸುವುದು ಅಷ್ಟು ಕಷ್ಟವೇ...?
ಕಷ್ಟ ಅಂತ ತಿಳಿಯುವುದು ನಮಗೆ ಅಪ್ರಿಯವಾದದ್ದನ್ನು ಮಾಡಲು ಶುರು ಮಾಡಿದಾಗ.
ಪ್ರೀತಿಯೇ ಆಗಲಿ, ಕಾಮವೇ ಆಗಲಿ, ದ್ವೇಷವೇ ಆಗಲಿ ಮನಪೂರ್ವಕವಾಗಿ ಮಾಡದಿದ್ದರೆ ಕಷ್ಟವೇ.

ಅವನು ಅವಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ.
ಅವಳು ಅವನನ್ನು ಅತಿಯಾಗಿ ದ್ವೇಷಿಸುತ್ತಾಳೆ.
ಇಬ್ಬರಿಗೂ ಹಾಗೇ ಮುಖ ಕೊಟ್ಟು ಹೇಳಲು ಮನಸ್ಸಿಲ್ಲ.
ಒಂದು ವೇಳೆ ಹೇಳಿದರೂ ಅದಕ್ಕೆ ಕಾರಣ ಬೇಕಲ್ಲವೇ...?
ಹಾಗಾದರೆ ಪ್ರೀತಿಸಲು ಕಾರಣ ಬೇಕೇ ..?
ನಾನು ನಿನ್ನನ್ನು ಪ್ರೀತಿಸುತ್ತೇನೆ ಅಂತ ಹೇಳಬಹುದು, ಯಾಕೇ ಅಂತ ಅವಳು ಕೇಳಿದರೆ ? ಏನು ಹೇಳುವುದು ?
ನಿನ್ನ ನಗು, ಸೌಂದರ್ಯ ಇಷ್ಟ ಅಂತ ಹೇಳಲೇ...
ಇವಳಿಗಿಂತ ಸುಂದರಿಯನ್ನು ನೋಡಿದ್ದೇನೆ. ಇವಳನ್ನೇ ಪ್ರೀತಿಸಬೇಕು ಎಂದರೆ ?
ನೀವು ಎಷ್ಟೇ ಕಾರಣಗಳನ್ನು ಹುಡುಕಿದರೂ ಉತ್ತರ ಸಿಗುವುದಿಲ್ಲ. ಸಿಕ್ಕರೂ ಅದು ಸರಿ ಹೊಂದುವುದಿಲ್ಲ.
"ಪ್ರೀತಿಸಲು ಕಾರಣ ಬೇಕಿಲ್ಲ...!
ಕಾರಣವಿದ್ದರೆ ಅದು ಬೇರೇನೆ ಆದೀತು".

ನನ್ನ ಎಷ್ಟು ಪ್ರೀತಿಸುತ್ತೀಯಾ ....?
ಈ ಪ್ರೆಶ್ನೆಯನ್ನು ಬಹಳಷ್ಟು ಪ್ರೇಮಿಗಳು ತಮ್ಮ ಸಂಗಾತಿಯಿಂದ ಕೇಳಿರುತ್ತಾರೆ.
ಅದಕ್ಕವರು ಆಕಾಶದಷ್ಟು, ನಕ್ಷತ್ರಗಳಷ್ಟು ಎಂದು ಹೇಳಿರುತ್ತಾರೆ.
ನಿಜಕ್ಕೂ ಅಷ್ಟು ಪ್ರೀತಿಸುವುದು ಸಾಧ್ಯವೇ...!
ಅಥವಾ ಸದ್ಯಕ್ಕೆ ಈ ಪ್ರೆಶ್ನೆಯಿಂದ ದೂರಾದರೇ ಸಾಕು ಅಂತಲೇ ..?
ಅವಳು ಹೇಳಿದಳು ಅಂತ ನಕ್ಷತ್ರವನ್ನು ಲೆಕ್ಕ ಹಾಕುತ್ತಾ ಕೂರಲು ಆಗುತ್ತದೆಯೇ...
ಮೊದಲಾಗಿ ಈ ಪ್ರೆಶ್ನೆಯೇ ಅಸಂಬದ್ಧ..
ಅವಳ ಪ್ರೀತಿಯನ್ನು ಲೆಕ್ಕದಲ್ಲಿ ಅಥವಾ ಒಂದು ವಸ್ತುವಿಗೆ ಹೋಲಿಕೆ ಮಾಡಿ ಹೇಳು ಅಂದರೆ ನೀನೇ ಅವಳನ್ನ ಪರಿಪೂರ್ಣವಾಗಿ ಪ್ರೀತಿಸುತ್ತಿಲ್ಲ ಅಂತ ಅರ್ಥ.
ಪರಿಶುದ್ಧವಾಗಿ ಪ್ರೀತಿಸುವವರೀಗೆ ಪ್ರೀತಿಯ ಅಂದಾಜು ಬೇಕಿಲ್ಲ..!
ಹಾಗೇ ಬೇರೆ ವಸ್ತುವಿಗೆ ಪ್ರೀತಿಯನ್ನು ಹೋಲಿಕೆ ಮಾಡಿದರೆ, ಪ್ರೀತಿಯ ಅರ್ಥವೇನು ?
ಪ್ರೀತಿಯು ನಿರ್ಜೀವ ವಸ್ತುವೇ....
ಭಾವನೆಗಳನ್ನು ವಸ್ತುವಿನೊಂದಿಗೆ ಹೋಲಿಕೆ ಮಾಡುವುದು ಮೂರ್ಖತನ ಅಲ್ಲವೇ....?
"ಎಷ್ಟು ಪ್ರೀತಿಸುತ್ತೀಯಾ ಅಂತ ಕೇಳುವುದಕ್ಕಿಂತ,
ಸದಾ ನನ್ನನ್ನೇ ಪ್ರೀತಿಸು ಅನ್ನುವುದು ಎಷ್ಟು ಹಿತ".

ಸದಾ ನನ್ನನ್ನೇ ಪ್ರೀತಿಸು..... ನನ್ನ ಬಿಟ್ಟು ಬೇರೆಯಾರನ್ನು ಪ್ರೀತಿಸಬೇಡ ಅನ್ನುವುದು ಸರಿಯೇ....?
ತುಂಬಾ ಪ್ರೇಮಿಗಳನ್ನು ಅತಿಯಾಗಿ ಕಾಡುವುದು ಈ ಪೊಸೆಸೀವ್ನೆಸ್.
ಅವಳು ನನ್ನನ್ನು ಬಿಟ್ಟು ಅವನನ್ನ ಪ್ರೀತಿಸಿಬಿಟ್ಟರೇ..!
ನನ್ನನ್ನ ತೊರೆದು ಹೋದರೆ ? ಅಂತ ನಾವುಗಳೇ ತಲೆಗೆ ಹುಳ ಬಿಟ್ಟುಕೊಂಡು ಅವಳಿಗೆ ಕಡಿವಾಣ ಹಾಕುವುದು ಎಷ್ಟು ಸರಿ....?
ನಿನ್ನನ್ನ ಬಿಟ್ಟು ಬೇರೆಯವರನ್ನು ಪ್ರೀತಿಸುವಷ್ಟು ದುರ್ಬಲವೇ ನಿನ್ನ ಪ್ರೀತಿ....!
ಹಾಗಿದ್ದರೇ ನೆಟ್ಟಗೆ ಪ್ರೀತಿಸುತ್ತಿಲ್ಲ ಎಂದಾಗುತ್ತದೆ ಅಲ್ಲವೇ.

ನೆಟ್ಟಗೆ ಪ್ರೀತಿಸುವುದು ಅಂದರೆ....?
ಸದಾಕಾಲ ಅವಳನ್ನೇ ಜಪಿಸುವುದೇ..... ಜಪಿಸುವುದು,ಧ್ಯಾನ ಮಾಡುವುದು ಅಷ್ಟು ಸುಲಭವೇ...?
ಹಾಗೇ ಅವಳನ್ನೇ ಧ್ಯಾನಿಸಲು ಹೊರಟರೇ.. ಮತ್ತೋಬ್ಬಳು ಮೇನಕೆ ಬಂದು ತಪಸ್ಸು ಭಂಗ ಮಾಡಿದರೆ....?
ಹಾಗಾದರೇ ಪ್ರೀತಿಸುವುದು ಹೇಗೆ ?

ಮೊದಲು ನಮ್ಮನ್ನ ನಾವು ಪ್ರೀತಿಸಲು ಕಲಿಯಬೇಕು.
ನನ್ನನ್ನೇ ನಾನು ಪ್ರೀತಿಸಲು ನಿರಾಕರಿಸಿದರೆ ಬೇರೇಯವರನ್ನ ಪ್ರೀತಿಸುವುದಕ್ಕೇ ಸಾಧ್ಯವೇ..!
ಪ್ರೀತಿಸಿದರು ಎಷ್ಟು ದಿನ ?
ನಮ್ಮನ್ನ ನಾವು ಪರಿಪೂರ್ಣವಾಗಿ ಪ್ರೀತಿಸಲು ಸಾಧುವೇ..?

ಆದರೆ ಪ್ರೀತಿ ಎನ್ನುವುದು ಫ಼ೇಸ್ಬುಕ್ ಸ್ಟೇಟಸ್ಸಿನಂತೆ, ನಮ್ಮದಕ್ಕಿಂತ ಬೇರೇಯವರದು ಇಷ್ಟವಾಗುತ್ತೆ.
ನಮ್ಮನ್ನ ಪ್ರೀತಿಸುವದಕ್ಕಿಂತ ಇನ್ನೊಬ್ಬರನ್ನು ಪ್ರೀತಿಸುವುದು ಅಷ್ಟೇನೂ ಕಷ್ಟವಲ್ಲ.
ಯಾಕಂದರೆ ಇನ್ನೊಬ್ಬರನ್ನು ಪ್ರೀತಿಸಿ, ಬಿಟ್ಟು ಬಿಡುವುದು ಮನುಜನಿಗೆ ಸುಲಭ, ಹೆಚ್ಚೇಂದರೇ ಒಂದೆರಡು ದುರಭ್ಯಾಸಗಳು ಶುರುವಾಗಬಹುದು.
ನಮ್ಮನ್ನ ನಾವು ಪ್ರೀತಿಸದೇ ಇರುವುದಕ್ಕೆ ಇದೆ ಕಾರಣವ ...?

ಹಾಗಾದರೇ ನಮ್ಮನ್ನ ನಾವು ಪ್ರೀತಿಸಿದರೆ, ಮತ್ತೊಬ್ಬರನ್ನು ಪ್ರೀತಿಸುವುದು ಸರಳವೇ..!

ನಮ್ಮ ತನವನ್ನೇ ಬಿಟ್ಟು ಪ್ರೀತಿಸಿದರೆ... ಜಗತ್ತನ್ನೇ ಪ್ರೀತಿಸಬಹುದಾ...?

ಮತ್ತೇ ಪ್ರೀತಿ ಅಂದರೆ.. ನಾನು ಅನ್ನುವುದನ್ನು ಬಿಟ್ಟು ಅವಳನ್ನು ಪ್ರೀತಿಸುವುದೇ ..?

ನಮ್ಮನ್ನ ಬೇರೇಯವರೀಗೇ ಅರ್ಪಿಸಿಕೊಳ್ಳುವುದಕ್ಕೆ ಆಗುತ್ತದೆಯೇ  ?

ಮನಸ್ಸು ಬಿಚ್ಚಿ "ಐ ಲವ್ ಯೂ ಫಾರೇವರ್" ಅಂದುಬಿಟ್ಟರೇ, ಮುಂದಕ್ಕೇನು ಹೇಳುವುದು ಅಂತ ಆಲೋಚನೆ.

ಹಾಗಾದರೇ ಪ್ರೀತಿಸುವುದು ಅಷ್ಟು ಕಷ್ಟವೋ ? ಅಂತ ಮೊದಲಿನ ಪ್ರೆಶ್ನೆಗೇ ಬರುತ್ತೇವೆ.

ಮೇಲಿರೋದೆಲ್ಲವನ್ನು ಮರೆತು ಈ ಕ್ಷಣ ಪ್ರೀತಿಸಿ.
ಯೋಚಿಸದೆ ಪ್ರೀತಿಸುವುದಕ್ಕೇ ಸಾಧ್ಯವೇ ..? ಅಂತ ಮನಸಿನಾಳದಲ್ಲಿ ಪ್ರೆಶ್ನೆ ಮೂಡಬಹುದು.

ಮಗುವಿನ ನಿಷ್ಕಲ್ಮಶ ನಗುವಿನ ಹಾಗೇ ಪರಿಶುದ್ಧವಾಗಿ ಪ್ರೀತಿಸಿ, ಎಲ್ಲವೂ ಸಾಧ್ಯ..
ಈ ಕ್ಷಣ ಪ್ರೀತಿ ನಿಮ್ಮದು ಅಂತ ಪ್ರೀತಿಸಿ.

                                   *****
©ಮಹೇಶ್ ಪುಲಿಕೇಶಿ
02-02-2017

Comments

Popular Posts