ಹೆಗ್ಗಣ ಸತ್ತೀರಬೇಕು
ಮನೆಯೆಲ್ಲಾ ಕೆಟ್ಟ ವಾಸನೆ..... ಏನಾಗಿರಬಹುದು ? ಬಹುಶಃ ಹೆಗ್ಗಣ ಸತ್ತೀರಬೇಕು. ಹ್ಞು ಹೆಗ್ಗಣದ ವಾಸನೆಯೇ.....
ಹೆಗ್ಗಣಕ್ಕೇನು ಬಂತು ದೊಡ್ಡ ರೋಗ ....?
ಸತ್ತೋರೀಗೆ ಅವರ ಕಡೆ ಅಂತ್ಯಕ್ರಿಯೆ ಮಾಡಲ್ವೇ ....?
ಥೂ....! ಏನಿದು ಪೆದ್ದನ ತರ ಏನೇನೋ ಆಲೋಚನೆ ಅನಿಸಿತು.
"ಮೊದಲು ಹೆಗ್ಗಣ ಹುಡುಕಬೇಕು, ಮಿಕ್ಕಿದ್ದು ಆಮೇಲೆ" ಎಂದು ತೊಡರುತ್ತಾ ಎದ್ದ.
ಸ್ವಲ್ಪ ತಡಕಾಡಿದ ಮೇಲೆ.....
ಹೆಗ್ಗಣ ಹೇಗಿರಬಹುದು ? ಚಿಕ್ಕವನಿದ್ದಾಗ ಅಮ್ಮ ಹೇಳಿದ ನೆನಪು, "ಕರ್ರಗೇ ದಪ್ಪಕ್ಕೇ ನಿಮ್ಮಪ್ಪನ ತರ ಇರುತ್ತೇ ಅಂದಿದ್ದಳು", ಆದರೇ ಅಪ್ಪನನ್ನು ನಾನು ನೋಡೆ ಇಲ್ವಲಾ.....!
ವಾಸನೇಯಂತೂ ಹೆಗ್ಗಣದ್ದೇ.... ಪದ್ದಕ್ಕನ ಮನೆಗೆ ಹೋಗಿದ್ದಾಗಲೂ ಇದೆ ವಾಸನೆ. ಏನಕ್ಕ ಅದು ಕೆಟ್ಟ ವಾಸನೆ ? ಅಂತ ಕೇಳಿದಕ್ಕೆ.
"ಹೆಗ್ಗಣ ಸತ್ತಿದೆ ಕಣೋ, ಹುಡುಕ್ತಾ ಇದ್ದೀನಿ ಸಿಕ್ತಿಲ್ಲ" ಎಂದಿದ್ದಳು.
ಭಗವಂತ....... ಈ ಕುರುಡನ ಮನೇಲೇ ಹೆಗ್ಗಣ ಸಾಯಬೇಕಿತ್ತಾ .....?
ಹೆಗ್ಗಣ ಸತ್ತೀರೋದು ಮನೇಯಲ್ಲೋ, ಮನಸ್ಸಿನಲ್ಲೋ....
ಆದರೂ ಹೆಗ್ಗಣದ ವಾಸನೆಯೇ.
*****
©ಮಹೇಶ್ ಪುಲಿಕೇಶಿ
25-01-2017
Comments
Post a Comment