ಪ್ರೇಮ ನಿವೇದನೆ

ಸೂಚನೆ: ನೀವೊಬ್ರೆ ಓದ್ಬೇಕು.
......,

ಸುಮ್ನೇ ಏನೋ ಬರೀಬೇಕು ಅಂತ ಬರೀತಾ ಇದ್ದೀನಿ.
ಹುಡುಗೀರನ್ನ ನೋಡಿದ್ರೆ ಒಳ್ಳೇ ದೆವ್ವ ಬಂದೋನಂಗೇ ಆಡ್ತಿದ್ದೆ.
ನನಗೇ ಕಾಣ್ಸೋ ಹುಡುಗಿರೇಲ್ಲಾ ತಾಟಕಿ, ಸೂರ್ಪಣಕ್ಕಿ ತರ ಕಾಣ್ತಿದ್ರು. 
ಅಪರೂಪಕ್ಕೆ ಫ್ರೇಂಡ್ಸ್ ಅಂತಾದ್ರೂ ಎರಡು ತಿಂಗ್ಳು ಇರೋದು ಹೆಚ್ಚು.
ನೀವು ಹೆಚ್ಚೂ-ಕಮ್ಮೀ ಒಂದು ವರ್ಷದಿಂದ ಇದ್ದೀರ.
ನೀವೇನೂ ಭಾರೀ ಸುಂದ್ರಿ, ಅಪ್ಸರೇ ಅಂತ ಇಷ್ಟ ಆಗಿಲ್ಲ.
ನಂಗೆ ನೀವು ಪುಟ್ಟ ಮಗು ತರ ಕಾಣ್ತೀರ, ಮುದ್ದ್ ಮುದ್ದಾಗಿ ಮಾತಾಡ್ತೀರ.
ನಿಷ್ಕಲ್ಮಶ ಮನಸ್ಸು, ಚಂದದ ಮುಖ ನನ್ನೆದೆಯೆಲ್ಲಿ ಅಚ್ಚೊತ್ತಿದಂತಿದೆ. 
ನಿಮ್ಮ ಜೊತೆ ಯಾವಾಗ್ಲೂ ಜಗಳ ಆಡ್ಬೇಕು ಅನ್ಸುತ್ತೆ. 
ನಿಮ್ಗೆ ನನ್ನ ಹೊಡಿಯೋಷ್ಟು ಕೋಪ ಬರ್ಸಿ. ಮತ್ತೇ ನಾನೇ ನಿಮ್ಮನ್ನ ಮುದ್ದು ಮಾಡ್ಬೇಕು, ಸಮಾಧಾನ ಮಾಡ್ಬೇಕು ಅನ್ಸುತ್ತೆ. 
ನಾನಂತೂ ಮನುಷ್ಯ ರೂಪದಲ್ಲೀರೋ ರಾಕ್ಷಸ, ನೀವು ಯಕ್ಷಕನ್ನಿಕೆಯ ತದ್ರೂಪ.
ನಿಮ್ದು ತುಂಬಾ ಶಾಂತ ಸ್ವಭಾವ.
ಎಷ್ಟೋ ಸಲ ನಂಗೂ ಅನಿಸದೆ ಇವಳ್ಯಾಕೇ ನಂಗೆ ಗಂಟು ಬಿದ್ಲು ಅಂತ.
ನಿಮ್ಮನ್ನ ದೂರ ಮಾಡ್ಬೇಕು ಅಂತ ಏನೇನೋ ಮಾಡ್ದೆ. ಆದ್ರೆ ಪ್ರತಿಸಾರಿಯೂ ನಾನೇ ಸೋಲ್ತಿದ್ದೇ.
ನಾವು ಯಾವ್ದನ್ನ ಅಲಕ್ಷ್ಯ ಮಾಡ್ತಿವೋ ಅದರ ಮೇಲೆ ಸೆಳೆತ ಜಾಸ್ತಿ. ನಾನ್ ಕಬ್ಬಿಣ ನೀವು ಆಯಸ್ಕಾಂತ ಅಂತೆಲ್ಲಾ ಹೇಳಲ್ಲ.
ನಾನೋಂದು ಬರಡು ಭೂಮಿ, ಕಸ ತುಂಬಿರೋ ಬೀದಿ ನೀವು ಅದನ್ನೆಲ್ಲಾ ಪರಿಶುದ್ಧ ಮಾಡೋ ಗಂಗಾಮಾತೇ.
ನಿಮ್ಮ ಪ್ರೀತಿಗೆ, ಮೌನಕ್ಕೆ ಶರಣಾಗಿದ್ದೇನೆ.
ಸಾಧ್ಯವಾದಷ್ಟೂ ನನ್ನನು ಆವರಿಸಿ. 
ಸದಾ ನಿಮ್ಮ ಕೋಪ, ಹುಸಿಮುನಿಸು ಹೀಗೇ ಇರಲಿ.
ನಿಮ್ಮನ್ನ ಹಾಗೇ ನೋಡೋಕೆ ನಂಗೆ ಇಷ್ಟ.
ಜಾಸ್ತೀ ಕಾಡ್ತೀನಿ ಅಂತ ಬೇಜಾರ್ ಮಾಡ್ಕೋಬೇಡಿ.
ಥೂ....ಪ್ರಾರಬ್ಧ.! ಏನೋ ಬರೀಬೇಕು ಅಂದು ಇನ್ನೇನೋ ಬರೆದೆ. ಹೋಗ್ಲಿಬಿಡಿ, ಮಿಕ್ಕಿದ್ದು ಮತ್ತೋಂದು ಸಲ ಬರೀತೀನಿ. ದೇವ್ರಾಣೇಗೂ ಇದು ಲವ್ ಲೆಟರ್ ಅಲ್ಲ, ನಂಗೆ ಲವ್ ಲೆಟರ್ ಬರೆಯೋಕು ಬರಲ್ಲ.

"ಐ ಲವ್ ಯು" ಅಂದು ಅಂತ್ಯ ಹಾಡಲ್ಲ.
ಎಷ್ಟೇ ಕಷ್ಟ ಆದ್ರೂ ನನ್ನ ಸಹಿಸಿಕೊಳ್ಳಿ. 
ಇಂಥಾ....! ಲೂಸ್ನಾ ಅದು ಹೇಗೆ ತಡ್ಕೊಂಡಿದ್ದಿರೋ...!!
ಇಲ್ಲಿಂದಾನೇ ಅಡ್ಡ್ಬಿಳ್ತೀನಿ.

ನನ್ನ ಉಸಿರಲ್ಲಿ ಬೆರೆತೀರೋ ಗಾಳಿ ತರ ಬೆರೆತು ಜೊತೆಯಾಗಿರೋಣ.

                                                        ಇತಿ,                                                        ಗೂಬೆ ಮಹೀ

Comments

Popular Posts